CHILD CARE| ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಲು ಈ ಆಹಾರ ಪದಾರ್ಥಗಳನ್ನು ಕೊಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಬೇಕೆಂದರೆ ಜ್ಞಾಪಕ ಶಕ್ತಿ ಚೆನ್ನಾಗಿರಬೇಕು. ಓದು ಒಂದೇ ಅಲ್ಲ, ಮಕ್ಕಳ ಬುದ್ದಿಶಕ್ತಿ ಚುರುಕಾಗಿರಬೇಕೆಂದರೆ ಮಕ್ಕಳ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ತಪ್ಪಿಸಲೇ ಬಾರದು.

ಕೆಂಪು ದ್ರಾಕ್ಷಿ, ನೀಲಿ, ನೇರಳೆ ಬೆರ್ರಿ ಹಣ್ಣುಗಳು ಮೆಮೊರಿ ಸುಧಾರಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ. ಇವುಗಳ ರಸವನ್ನು ಮಕ್ಕಳು ದಿನನಿತ್ಯ ಕುಡಿದರೆ ಅವರ ಜ್ಞಾಪಕಶಕ್ತಿ ವೃದ್ಧಿಯಾಗುವ ಸಾಧ್ಯತೆ ಇದೆ. ತಾಜಾ ಬೆರಿಹಣ್ಣುಗಳನ್ನು ತಿನ್ನುವುದರಿಂದ ಅವರ ಮೆದುಳಿನ ಕಾರ್ಯವು ಸುಧಾರಿಸುತ್ತದೆ.

ಮೀನು ತಿನ್ನುವುದು ಸಹ ಮುಖ್ಯವಾಗಿದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇವು ಮೆದುಳಿನ ಆರೋಗ್ಯವನ್ನು ಸುದಾರಿಸುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಆಲ್ಝೈಮರ್ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇವು ಜ್ಞಾಪಕಶಕ್ತಿಯನ್ನು ಸುಧಾರಿಸುತ್ತವೆ. ವಾರದಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿ ಮೀನುಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ.

ಬಾದಾಮಿ, ಗೋಡಂಬಿ, ಪಿಸ್ತಾ, ಒಣದ್ರಾಕ್ಷಿ ಮತ್ತು ವಾಲ್‌ನಟ್‌ಗಳನ್ನು ಸಹ ಮಕ್ಕಳಿಗೆ ಪ್ರತಿದಿನ ಕೊಡಬೇಕು. ನರಗಳ ಸರಿಯಾದ ಕಾರ್ಯನಿರ್ವಹಣೆಗೆ ಇವೆಲ್ಲವೂ ಅತ್ಯಗತ್ಯ. ಪ್ರತಿದಿನ ಮೊಟ್ಟೆ ಕೊಡುವುದನ್ನು ಮರೆಯಬೇಡಿ. ಇದರಲ್ಲಿ ಕೋಲೀನ್ ಎಂಬ ಪೋಷಕಾಂಶವಿದ್ದು, ಇದು ಗ್ರಹಿಕೆಯನ್ನು ಹೆಚ್ಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!