ಮಗುವಿಗೆ ಕುಳಿತು ಹಾಲು ಕುಡಿಸುವುದರಿಂದ ಬೆನ್ನು ನೋವು ಬರುತ್ತದೆ. ನಾವೆಲ್ಲಾ ಮಲಗಿಕೊಂಡೇ ಮಕ್ಕಳಿಗೆ ಹಾಲು ಕುಡಿಸ್ತಾ ಇದ್ವಿ, ಮಲ್ಕೊಂಡು ಕುಡಿಸಿದ್ರೆ ಏನೂ ಆಗೋದಿಲ್ಲ ಎಂದು ದೊಡ್ಡವರು ಸಲಹೆ ನೀಡ್ತಾರೆ. ಆದರೆ ಕೆಲವು ಮಾಹಿತಿಯನ್ನು ವೈದ್ಯರಿಂದ ಪಡೆಯುವುದು ಅತಿಮುಖ್ಯ.
ನೀವು ಮಲಗಿ, ಪಕ್ಕದಲ್ಲಿ ಮಗುವನ್ನು ಮಲಗಿಸಿಕೊಂಡು ಹಾಲು ಕುಡಿಸಲೇಬಾರದು ಎಂದಲ್ಲ, ಯಾವಾಗಿನಿಂದ ಹೀಗೆ ಮಾಡಬಹುದು ಎನ್ನುವ ಮಾಹಿತಿಯನ್ನು ವೈದ್ಯರಿಂದ ತಿಳಿದುಕೊಳ್ಳಿ. ಮಲಗಿ ಹಾಲುಣಿಸುವುದರಿಂದ ಶ್ವಾಸನಾಳಗಳಿಗೆ ಹಾಲು ಹೋಗುವ ಸಾಧ್ಯತೆ ಇದೆ. ಇದರಿಂದಾಗಿ ಮಗುವಿಗೆ ಉಸಿರಾಡಲು ಆಗದೇ ಮೃತಪಡುವ ಸಾಧ್ಯತೆ ಹೆಚ್ಚಿದೆ.
ಇನ್ನು ಬಾಯಿಂದ ಹಾಲು ಸೋರಿ ಕಿವಿಗೆ ಹೋಗಿ, ಮಕ್ಕಳಿಗೆ ಕಿವಿಯ ಸೋಂಕು ತಗುಲುತ್ತದೆ. ಮಕ್ಕಳಿಗೆ ಮಲಗಿ ಹಾಲು ಕುಡಿಸುವ ಮುನ್ನ ಒಮ್ಮೆ ವೈದ್ಯರನ್ನು ಕಾಣಬೇಕು.
ತಿರುವನಂತಪುರದಲ್ಲಿ ತಾಯಿ ಮಗುವಿಗೆ ಮಲಗಿ ಹಾಲು ಕುಡಿಸಿದ್ದು, ಶ್ವಾಸನಾಳದಲ್ಲಿ ಹಾಲು ಸಿಲುಕಿ ಮಗುವಿಗೆ ಉಸಿರಾಡಲು ಆಗದೇ ಮೃತಪಟ್ಟಿದೆ.