ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂದ್ರಾದ ಪ್ರಸಿದ್ಧ ಹೊಟೇಲ್‌ವೊಂದರಲ್ಲಿ ನಾನ್‌ವೆಜ್ ಖಾದ್ಯದ ಬದಲು ಸತ್ತ ಇಲಿಯನ್ನು ತಟ್ಟೆಗೆ ಬಡಿಸಲಾಗಿದೆ.
ಹೌದು, ಊಟದ ಬದಲು ಸತ್ತ ಇಲಿ ಎಂದರೆ ವಾಕರಿಕೆ ಬರದೇ ಇದ್ದೀತೇ, ಪಾಪಪಂಚೋದ ಢಾಬಾ ಎಂಬ ಹೊಟೇಲ್‌ನಲ್ಲಿ ಚಿಕನ್ ಡಿಶ್‌ನ್ನು ಕಸ್ಟಮರ್ ಆರ್ಡರ್ ಮಾಡಿದ್ದಾರೆ.
ತಂದ ನಂತರ ಅದನ್ನು ತಟ್ಟೆಗೆ ಬಡಿಸಿದ್ದಾರೆ, ತಟ್ಟೆಯಲ್ಲಿ ಗ್ರೇವಿಯಲ್ಲಿ ಮುಳುಗಿದ್ದ ಸತ್ತ ಇಲಿಯನ್ನು ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಬಾಂದ್ರಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮ್ಯಾನೇಜರ್ ಹಾಗೂ ಅಡುಗೆಯವರನ್ನು ಬಂಧಿಸಿದ್ದಾರೆ.