ಕಮಲ್ ಹಾಸನ್ ನನ್ನನ್ನು ‘ಕನ್ನ’ ಎಂದಾಗ ತುಂಬಾ ವಿಶೇಷ ಅನಿಸಿತು: ನಟಿ ಮಾಲಾಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತ ಚಿತ್ರರಂಗದವರ ಸಮಾಗಮ ಸೈಮಾ ಅವಾರ್ಡ್ಸ್ 2022 ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ಅವರ ನೆನಪಿನೊಂದಿಗೆ ಸೆಪ್ಟೆಂಬರ್​ 10, 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು.

ಈ ಸಮಾರಂಭದಲ್ಲಿದ್ದ ಹಿರಿಯ ನಟ ಕಮಲ್ ಹಾಸನ್​ ಬಳಿ ನಟಿ ಮಾಲಾಶ್ರೀ ತೆರಳಿ ಬಹಳ ಸಂತೋಷದಿಂದ ಮಾತನಾಡಿದ್ದಾರೆ. ಉಭಯ ಕಲಾವಿದರು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

ಈ ಬಗ್ಗೆ ನಟಿ ಮಾಲಾಶ್ರೀ ಟ್ವಿಟರ್​ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಐಕಾನ್ ಕಮಲ್ ಹಾಸನ್​ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷಕರ ವಿಷಯ. ನೀಲ ಮಲರ್ಗಲ್​ ಸಿನಿಮಾದಲ್ಲಿ ನಿರ್ವಹಿಸಿದ್ದ ಕನ್ನ ಪಾತ್ರ ನೆನಪಿಸಿಕೊಂಡಾಗ ತುಂಬಾ ವಿಶೇಷ ಅನಿಸಿತು. ಬಾಲ್ಯದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದು, ತುಂಬಾ ಹೆಮ್ಮೆಯ ವಿಷಯ ಎಂದು ನಟಿ ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ.

1979ರಲ್ಲಿ ತರೆಕಂಡ ಕಮಲ್​ ಹಾಸನ್ ಅಭಿನಯದ Neela Malargal ಸಿನಿಮಾದಲ್ಲಿ ಮಾಲಾಶ್ರೀ ಕನ್ನನ್ (ಬಾಲಕಿ ಪಾತ್ರ) ಪಾತ್ರ ನಿರ್ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!