Sunday, October 2, 2022

Latest Posts

ʻರಾಜ ಎಲ್ಲಿದ್ದರೂ ರಾಜನೇʼ: ಪ್ರಭಾಸ್‌ಗೆ ಹೊಗಳಿಕೆಯ ಸುರಿಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್‌ ದೊಡ್ಡಪ್ಪ ಟಾಲಿವುಡ್ ನ ರಿಯಲ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರು ಆರೋಗ್ಯ ಸಮಸ್ಯೆಯಿಂದ ಭಾನುವಾರ ಬೆಳಗ್ಗೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಸೋಮವಾರ ಮಧ್ಯಾಹ್ನ, ಅವರ ಪಾರ್ಥಿವ ಶರೀರವನ್ನು ಸರ್ಕಾರಿ ವಿಧಿವಿಧಾನಗಳ ನಡುವೆ ಮೊಯಿನಾಬಾದ್ ಫಾರ್ಮ್ ಹೌಸ್‌ನಲ್ಲಿ ಸಾಂಪ್ರದಾಯಿಕ ಕ್ಷತ್ರಿಯ ಪದ್ದತಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೃಷ್ಣರಾಜು ಅವರ ಅಂತ್ಯಸಂಸ್ಕಾರಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೃಷ್ಣಂರಾಜು ಅವರನ್ನು ನೋಡಲು ಬರುತ್ತಿದ್ದ ಅಭಿಮಾನಿಗಳಿಗೆ ಪ್ರಭಾಸ್ ಮಾಡಿದ ಕೆಲಸವನ್ನು ನೋಡಿ ಅಭಿಮಾನಿಗಳು ಹಾಗೂ ಸಹ ಕಲಾವಿದರು ಕೂಡ ಭೇಶ್ ಎನ್ನುತ್ತಿದ್ದಾರೆ. ‌ಕೃಷ್ಣಂರಾಜು ಅಂತಿಮ ದರ್ಶನಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು. ಬಂದವರ್ಯಾರೂ ಹಸಿವಿನಿಂದ ಹಾಗೆ ಹೋಗಬಾರದು ಎಲ್ಲರಿಗೂ ಊಟದ ವ್ಯವಸ್ಥೆ ಆಗಬೇಕು ಎಂದಿದ್ದರಂತೆ.

ಈ ವಿಚಾರವನ್ನ ಅಭಿಯಾನಿಯೊಬ್ಬ ಟ್ವೀಟ್‌ ಮಾಡಿದ್ದಾರೆ. “ಪ್ರಭಾಸ್, ಅಣ್ಣಾ.. ನಿಮ್ಮ ಪರಿಸ್ಥಿತಿಯಲ್ಲಿದ್ದವರು ಯಾರೂ ಅಭಿಮಾನಿಗಳ ಬಗ್ಗೆ ಯೋಚಿಸುತ್ತಿರಲಿಲ್ಲ, ಆದರೆ ನಿನ್ನೆ ಬಂದ ಅಭಿಮಾನಿಗಳಿಗೆ ನೀವು ಅನ್ನ ಹಾಕಿ ಕಳುಹಿಸಿದ್ದೀರಿ” ಎಂದು ಮಹೇಶ್‌ ಅಭಿಮಾನಿ ಟ್ವೀಟ್‌ ಮಾಡಿದ್ದಾರೆ. ಈ ಭಾವನಾತ್ಮಕ ಟ್ವೀಟ್‌ ರಾಜ ಎಲ್ಲಿದ್ದರೂ ರಾಜನೇ ಎಂದು ಟ್ವೀಟ್ಟರ್‌ನಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!