ಹೈದರಾಬಾದ್‌ನಲ್ಲಿ ಮಹಿಳಾ ಲೋಕೋ ಪೈಲಟ್ ನಾಪತ್ತೆ: ಆತಂಕದಲ್ಲಿ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೈದರಾಬಾದ್ ನಲ್ಲಿ ಮಹಿಳಾ ಲೋಕೋ ಪೈಲಟ್ ನಾಪತ್ತೆಯಾಗಿರುವ ಘಟನೆ ಆಕೆ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಸನತ್ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಿಳೆ ಸಿಕಂದರಾಬಾದ್ ರೈಲು ನಿಲ್ದಾಣದ ಲೋಕೋ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ.30ರ ಸಂಜೆಯಿಂದ ಮಹಿಳಾ ಲೋಕೋ ಪೈಲಟ್ ಕಾಣಿಸುತ್ತಿಲ್ಲ.

ಯಾವಾಗಲು ಕರೆ ಮಾಡುವ ಹಾಗೆ ಆ ದಿನ ಕೂಡ ಆಕೆಯ ತಂದೆ ಭಾಸ್ಕರ್ ರಾವ್ ದೂರವಾಣಿ ಕರೆ ಮಾಡಿದ್ದರು. ಆದರೆ ಕೆಲ ಹೊತ್ತಿನವರೆಗೆ ಫೋನ್ ತೆಗೆಯದ ಕಾರಣ ಮನೆಯ ಮಾಲೀಕರಿಗೆ ಕರೆ ಮಾಡಿದ್ದಾರೆ. ಸಂಜೆ 4 ಗಂಟೆಗೆ ಆಕೆ ಹೊರಗೆ ಹೋಗಿರುವುದಾಗಿ ಮನೆಯ ಮಾಲೀಕರು ತಿಳಿಸಿದರು. ತಂದೆಗೆ ಅನುಮಾನ ಬಂದಿದ್ದರಿಂದ ಮನೆ ಮಾಲೀಕರ ಸಹಾಯದಿಂದ ಮಧ್ಯರಾತ್ರಿ 12 ಗಂಟೆಗೆ ಮನೆ ಬಾಗಿಲು ತೆರೆದು ನೋಡಿದಾಗ ಆಕೆ ಕೋಣೆಯಲ್ಲಿ ಇರಲಿಲ್ಲ. ಆದರೆ ಫೋನ್ ಮಾತ್ರ ಕೋಣೆಯಲ್ಲಿದೆ. ಇದರಿಂದ ತಂದೆ ಭಾಸ್ಕರ್ ರಾವ್ ಮಗಳು ನಾಪತ್ತೆಯಾಗಿದ್ದಾಳೆ ಎಂದು ಭಾವಿಸಿ ಸನತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾಪತ್ತೆಯಾಗಿರುವ ಮಹಿಳೆ 5.5 ಅಡಿ ಎತ್ತರವಿದ್ದು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡಬಲ್ಲರು ಎಂದು ಹೇಳಿದರು. ಯಾರಾದರೂ ಆಕೆಯನ್ನು ಕಂಡರೆ ಸನತ್ ನಗರ ಎಸ್‌ಎಚ್‌ಒ 9490617132, ಎಸ್‌ಐ 8919558998 ಮೊಬೈಲ್ ಫೋನ್ ಸಂಖ್ಯೆಗಳಿಗೆ ತಿಳಿಸಲು ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!