BE POSITIVE: ನಮ್ಮವರು ನಮ್ಮನ್ನು ಬಿಟ್ಟು ಹೋಗಿಬಿಟ್ರೆ? ನೆಗೆಟಿವ್ ಆಲೋಚನೆಗಳು ಸದಾ ಕಾಡುತ್ತವಾ? ಹಾಗಿದ್ರೆ ಇದನ್ನು ಓದಿ..

ಇಷ್ಟು ಹೊತ್ತಾದ್ರೂ ಅಪ್ಪ ಮನೆಗೆ ಬಂದಿಲ್ಲ, ಅಮ್ಮ ಗೀತಾ ಆಂಟಿ ಮನೆಲೂ ಇಲ್ಲ, ಹಾಗಿದ್ರೆ ಎಲ್ಲಿ ಹೋದ್ರು? ತಾತ ಬಾತ್‌ರೂಂ ಲಾಕ್ ಮಾಡಿಕೊಂಡು ತುಂಬಾ ಹೊತ್ತಾಯ್ತು, ಗಂಡ ಫೋನ್ ಯಾಕೆ ತೆಗೀತಿಲ್ಲ, ಏನಾದ್ರೂ ಆಯ್ತಾ?

ಈ ರೀತಿ ಆಲೋಚನೆಗಳು ನಿಮ್ಮ ತಲೆಯಲ್ಲೂ ಓಡಾಡಿರಬಹುದು, ಇದು ಸಾಮಾನ್ಯ ಆದರೆ ಅತಿಯಾದ್ರೆ ನಿಮ್ಮ ಜೀವನಕ್ಕೆ ತೊಂದರೆ. ಸಣ್ಣ ಪುಟ್ಟ ವಿಷಯಗಳಲ್ಲಿಯೂ ನೆಗೆಟಿವ್ ಆಲೋಚನೆಗಳು ಇದ್ದರೆ ಜೀವನ ಮಾಡೋದು ಹೇಗೆ? ಎಷ್ಟರ ಮಟ್ಟಿಗೆ ಎಂದರೆ ಬಸ್‌ಸ್ಟಾಂಡ್‌ನಲ್ಲಿ ನಿಂತಾಗ ವ್ಯಕ್ತಿಯೊಬ್ಬ ಐದು ನಿಮಿಷಕ್ಕೂ ಹೆಚ್ಚು ಸಮಯ ಒಂದೇ ಕಡೆ ನಿಂತಿದ್ದರೆ ಇವರು ಇಲ್ಲೇ ಯಾಕೆ ನಿಂತಿದ್ದಾರೆ? ಕಳ್ಳ ಇರಬಹುದಾ? ಕಿಡ್ನ್ಯಾಪ್ ಮಾಡೋಕೆ ಬಂದಿದ್ದಾರಾ? ಅಥವಾ ಬಾಂಬ್ ಇಟ್ಟಿದ್ದಾರಾ ಹೀಗೆ ಸಾಕಷ್ಟು ಬೇಡವಾದ ಆಲೋಚನೆಗಳು ತಲೆತಿನ್ನುತ್ತವೆ.

ನಾನು ನೆಗೆಟಿವ್ ವ್ಯಕ್ತಿ, ಮನಸ್ಸಿನಲ್ಲಿ ಸಾವಿರ ನೆಗೆಟಿವ್ ಅಂಶಗಳಿಟ್ಟುಕೊಂಡು, ಬಾಯಲ್ಲಿ ಮಾತ್ರ ಪಾಸಿಟಿವ್ ಅಂಶಗಳ ಬಗ್ಗೆ ಮಾತನಾಡುತ್ತೇನೆ ಎನ್ನುವುದನ್ನು ತಿಳಿದುಕೊಳ್ಳುವುದೇ ಸಾಕಷ್ಟು ಜನರಿಗೆ ಸವಾಲು. ಮೊದಲು ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಎಲ್ಲರಿಗೂ ಕಷ್ಟದ ವಿಷಯವೇ.

ಪಾಸಿಟಿವ್ ಯೋಚನೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ?

  • ಅತಿಯಾದ ಪ್ರೀತಿ
  • ಈ ಹಿಂದೆ ಪ್ರೀತಿಪಾತ್ರರನ್ನು ಕಳೆದುಕೊಂಡ ಅನುಭವ
  • ಅಪಘಾತ, ಕಿಡ್ನಾಪ್ ಈ ರೀತಿ ಸುದ್ದಿಗಳನ್ನು ಮನಸ್ಸಿಗೆ ತೆಗೆದುಕೊಳ್ಳುವುದು
  • ತುಂಬಾ ಪಾಸಿಟಿವ್ ಆಗಿದ್ದು, ಹೋಪ್ಸ್ ಇಟ್ಟುಕೊಂಡು ಆಗದೇ ಹೋದರೆ ಎನ್ನುವ ಭಯ
  • ನೆಗೆಟಿವ್ ವ್ಯಕ್ತಿಗಳ ಸಂಘ
  • ಯಾವಾಗಲೂ ಕೆಟ್ಟ ಆಲೋಚನೆಗಳಿಗೆ ಮಣೆ ಹಾಕುವುದು
  • ಜಗತ್ತಿನ ಪರಿಚಯ ಇಲ್ಲದೆ ಇರುವುದು
  • ಟ್ರಾವೆಲ್ ಮಾಡದೇ ಇರುವುದು

    ನೆಗೆಟಿವ್ ಆಲೋಚನೆಗಳನ್ನು ಹೊಡೆದೋಡಿಸೋದು ಹೇಗೆ?
     
  • ಆಲೋಚನೆಗಳು ಮನಸ್ಸಿಗೆ ಬಂದ ತಕ್ಷಣ ಒಂದು ಕ್ಷಣ ಪಾಸ್ ಮಾಡಿ, ದೀರ್ಘವಾಗಿ ಉಸಿರಾಡಿ
  • ನಿಮ್ಮ ಆಲೋಚನೆಗಳಲ್ಲಿ ಮುಳುಗಿದ್ದೀರೋ ಅಥವಾ ನಿಜವಾಗಿಯೂ ಕೆಟ್ಟ ಪರಿಸ್ಥಿತಿ ಎದುರಾಗಿದೆಯೋ ವ್ಯತ್ಯಾಸ ತಿಳಿಯಿರಿ
  • ಅತಿಯಾದ ಸಕಾರಾತ್ಮಕತೆಯಲ್ಲ, ಬದುಕು ಹೇಗಿದೆ ಹಾಗಿ ಒಪ್ಪಿಕೊಳ್ಳೂತ್ತೇನೆ ಎನ್ನುವ ಭಾವನೆ ಮೂಡಲಿ
  • ನಿಮ್ಮ ಭಾವನೆಗಳಿಗೆ ಹೆಸರಿಡಿ. ನನಗೆ ಈ ರೀತಿ ಆಲೋಚನೆ ಬರುತ್ತಿದೆ, ಇದು ಬರೀ ಆಲೋಚನೆ ಅಷ್ಟೆ, ನಿಜ ಅಲ್ಲ ಎಂದುಕೊಳ್ಳಿ. ಇದನ್ನು ಅಭ್ಯಾಸ ಮಾಡಿ.
  • ಏನೇ ಕೆಟ್ಟ ಭಾವನೆ ಬಂದಾಗಲೂ ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ.ನನ್ನ ಉದ್ದೇಶ ಒಳ್ಳೆಯದು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ
  • ಈಗ ಯಾವುದೋ ಕೆಟ್ಟ ಆಲೋಚನೆಯಲ್ಲಿ ಸಮಯ ಕಳೆಯುವ ಬದಲು, ಪ್ರಾಕ್ಟಿಕಲ್ ಆಗಿ ಯೋಚಿಸಿ, ಇದು ನಿಮಗೆ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!