June 15, 2026
Monday, June 15, 2026
spot_img

SNACKS | ಮೆಂತ್ಯ ಸೊಪ್ಪಿನ ವಡೆ ರೆಸಿಪಿ, ಸಂಜೆ ಟೀ ಟೈಮ್‌ಗೆ ಗರಿಗರಿಯಾದ ಸ್ನ್ಯಾಕ್ಸ್ ಮಾಡುವ ಸರಳ ವಿಧಾನ ಇಲ್ಲಿದೆ

ಸಂಜೆಯ ಟೀ ಟೈಮ್‌ಗೆ ಏನಾದರೂ ಡಿಫರೆಂಟ್ ಆಗಿ ಹಾಗೂ ಕ್ರಿಸ್ಪಿಯಾಗಿ ತಿನ್ನಬೇಕು ಅನ್ನಿಸಿದರೆ ಈ ಮೆಂತ್ಯ ಸೊಪ್ಪಿನ ವಡೆ ಬೆಸ್ಟ್ ಆಪ್ಷನ್. ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಇದನ್ನು ಸುಲಭವಾಗಿ ಮಾಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಹೆಲ್ತಿ ಸ್ನ್ಯಾಕ್ಸ್ ಮಾಡುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ
ಮೆಂತ್ಯ ಸೊಪ್ಪು
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ
ಕೊತ್ತಂಬರಿ ಸೊಪ್ಪು
ಕರಿಬೇವು
ಸೋಂಪು ಕಾಳು
ಅಕ್ಕಿ ಹಿಟ್ಟು
ಉಪ್ಪು
ಎಣ್ಣೆ

ಮಾಡುವ ವಿಧಾನ:
ಮೊದಲು ನೆನೆಸಿದ ಕಡಲೆಬೇಳೆಯಿಂದ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಬೇಕು. ನಂತರ ಮಿಕ್ಸಿ ಜಾರ್‌ಗೆ ಬೇಳೆಯನ್ನು ಹಾಕಿ, ನೀರು ಸೇರಿಸದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಬೇಳೆ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಹೆಚ್ಚಿದ ಮೆಂತ್ಯ ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಸೋಂಪು ಕಾಳು ಸೇರಿಸಿ. ಅದಕ್ಕೆ ಅಕ್ಕಿ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಿಂದ ಕಲಸಬೇಕು. ನಂತರ ಎಣ್ಣೆಯನ್ನು ಕಾಯಿಸಲು ಇಟ್ಟು. ಕೈಗೆ ಸ್ವಲ್ಪ ನೀರು ಅಥವಾ ಎಣ್ಣೆ ಸವರಿಕೊಂಡು, ಸಣ್ಣ ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ, ಅಂಗೈಯಲ್ಲಿ ಇಟ್ಟು ಲಘುವಾಗಿ ತಟ್ಟಿ ವಡೆಯ ಆಕಾರ ನೀಡಿ. ನಂತರ ಎಣ್ಣೆ ಚೆನ್ನಾಗಿ ಕಾದ ನಂತರ, ಉರಿಯನ್ನು ಮಧ್ಯಮ ಉರಿಯಲ್ಲಿ ಇಟ್ಟು, ತಟ್ಟಿದ ವಡೆಗಳನ್ನು ಒಂದೊಂದಾಗಿ ಎಣ್ಣೆಗೆ ಬಿಡಬೇಕು. ವಡೆಗಳು ಎರಡೂ ಕಡೆ ಸಮನಾಗಿ ಬೆಂದು, ತಿಳಿ ಚಿನ್ನದ ಬಣ್ಣ ಬಂದು ಗರಿಗರಿಯಾಗುವವರೆಗೆ ಕರಿದರೆ ಬಿಸಿಬಿಸಿಯಾದ, ಗರಿಗರಿಯಾದ ಮೆಂತ್ಯ ಸೊಪ್ಪಿನ ವಡೆ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !