ತಮಿಳುನಾಡು-ಶ್ರೀಲಂಕಾ ನಡುವೆ ಮತ್ತೆ ಶುರುವಾಗಲಿದೆ ಹಡಗು ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಫ್ನಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವಿನ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ.

40 ವರ್ಷದ ನಂತರ, ಕಳೆದ ಅಕ್ಟೋಬರ್‌ನಲ್ಲಿ ಪ್ರಾರಂಭಿಸಿದ್ದ ದೋಣಿ ಸೇವೆಯು ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿತ್ತುದೋಣಿ ಸೇವೆಯನ್ನು ಮತ್ತೆ ಪ್ರಾರಂಭಿಸುತ್ತಿರುವುದು, ಭಾರತ ಸರ್ಕಾರದ ಜನಕೇಂದ್ರಿತ ನೀತಿಯ ದೃಢೀಕರಣವಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

ಕಾಂಕೆಸಂತುರೈ ಬಂದರನ್ನು ಪುನಶ್ಚೇತನಗೊಳಿಸಲು ಯೋಜನಾ ವೆಚ್ಚವಾದ ₹531 ಕೋಟಿಯನ್ನು ಭಾರತವು ಶ್ರೀಲಂಕಾಕ್ಕೆ ನೀಡಿದೆ.ಶ್ರೀಲಂಕಾದ ಕಾಂಕೆಸಂತುರೈ ಬಂದರು (ಕೆಕೆಎಸ್) ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಪಾಂಡಿಚೇರಿಯ ಕರೈಕಲ್ ಬಂದರಿನಿಂದ 104 ಕಿಲೋಮೀಟರ್ ದೂರದಲ್ಲಿದೆ.ತಮಿಳುನಾಡಿನ ನಾಗಪಟ್ಟಣಂನಿಂದ ಕಾಂಕೆಸಂತುರೈ ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕ ದೋಣಿಯು ಮೂರೂವರೆ ಗಂಟೆಗಳಲ್ಲಿ 111 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!