FESTIVAL | ಮಹಾಶಿವರಾತ್ರಿ ಉಪವಾಸ ಆಚರಣೆಗೂ ಇವೆ ನಿರ್ದಿಷ್ಟ ನಿಯಮಾವಳಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಶಿವರಾತ್ರಿಯ ದಿನ ಉಪವಾಸ ಮಾಡುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎನ್ನುವ ನಂಬಿಕೆ ಇದೆ. ಕೆಲವರು ಕಠಿಣ ಉಪವಾಸದ ಮೂಲಕ ಶಿವನನ್ನು ಧ್ಯಾನಿಸುತ್ತಾರೆ. ಆದರೆ ನಾವು ಉಪವಾಸ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಹಾಗಾದ್ರೆ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಅನ್ನೋದನ್ನ ನೋಡೋಣ.

ಉಪವಾಸದ ದಿನ ಸೂರ್ಯೋದಯ ಅಥವಾ ಬ್ರಹ್ಮ ಮುಹೂರ್ತದ ಮೊದಲು ಎದ್ದೇಳಬೇಕು.

ಪೂಜೆ, ಆಚರಣೆಗಳು ಅಥವಾ ವ್ರತವನ್ನು ಮಾಡುವ ಮೊದಲು ಸಂಕಲ್ಪ ಹೊಂದುವುದು ಬಹಳ ಮುಖ್ಯ. ಹಾಗೆಯೇ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಸ್ವಲ್ಪ ನೀರು ಮತ್ತು ಅಕ್ಕಿ ಕಾಳುಗಳನ್ನು ಕೈಯಲ್ಲಿ ತೆಗೆದುಕೊಂಡು ಶಿವನ ಮುಂದೆ ಉಪವಾಸ ಮಾಡಲು ಸಂಕಲ್ಪ ಮಾಡಿ.

ಕೆಲವು ಜನರು ಯಾವುದೇ ಆಹಾರ ಅಥವಾ ನೀರು ಇಲ್ಲದೆ ಸಂಪೂರ್ಣ ಉಪವಾಸವನ್ನು ಆಚರಿಸುತ್ತಾರೆ. ಇನ್ನು ಕೆಲವರು ನೀರು ಕುಡಿಯುತ್ತಾರೆ. ಉಪವಾಸ ಆಚರಿಸುವ ಭಕ್ತರು ಹಣ್ಣು ತಿನ್ನುತ್ತಾರೆ ಎಂಬ ಅಂಶವೂ ಇದೆ.

ಉಪವಾಸ ಮಾಡುವಾಗ, ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಸಮತೋಲನದಲ್ಲಿ ಇಟ್ಟುಕೊಳ್ಳಿ. ಕೆಟ್ಟ ಆಲೋಚನೆಗಳನ್ನು ತಪ್ಪಿಸಿ ಮತ್ತು ಕೆಟ್ಟ ಪದಗಳನ್ನು ಬಳಸಬೇಡಿ. ಪೂರ್ಣ ಶಿವ ಧ್ಯಾನದಲ್ಲಿ ದಿನ ಕಳೆಯಿರಿ.

ಈ ಉಪವಾಸವನ್ನು ಆಚರಿಸುವ ಭಕ್ತರು “ಓಂ ನಮಃ ಶಿವಾಯ” ಎಂಬ ಮಂತ್ರವನ್ನು ದಿನಕ್ಕೆ ಹಲವಾರು ಬಾರಿ ಜಪಿಸಬೇಕು. ಪೂಜೆಯ ನಂತರ, ಉಪವಾಸದ ಸಮಯದಲ್ಲಿ ಶಿವನ ಕಥೆಗಳನ್ನು ಕೇಳಬಹುದು.

ಭಕ್ತರು ವ್ರತವನ್ನು ಆಚರಿಸಿ ಸಾತ್ವಿಕ ಆಹಾರವನ್ನು ಸೇವಿಸಬೇಕು. ಬೇಳೆಕಾಳುಗಳು, ಅಕ್ಕಿ, ಗೋಧಿ ಮತ್ತು ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ತಪ್ಪಿಸಿ ಮತ್ತು ರಾಗಿ, ಹಣ್ಣುಗಳು ಮತ್ತು ಕೆಲವು ತರಕಾರಿಗಳನ್ನು ಸೇವಿಸಿ. ಬೆಳ್ಳುಳ್ಳಿ ಮತ್ತು ಈರುಳ್ಳಿ ಬೆರೆಸಿದ ಆಹಾರಗಳನ್ನು ಸೇವಿಸಬಾರದು.

ಉಪವಾಸದ ಫಲವನ್ನು ಪಡೆಯಲು ಸೂರ್ಯೋದಯದ ನಡುವೆ ಮತ್ತು ಚತುರ್ದಶಿ ತಿಥಿ ಮುಗಿಯುವ ಮೊದಲು ಉಪವಾಸವನ್ನು ಕೊನೆಗೊಳಿಸುವುದು ಉತ್ತಮ ಎಂದು ನಂಬುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!