ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸಿನಿಮಾ ಪಠಾಣ್ಗೆ ಒಂದಿಲ್ಲೊಂದು ಕಂಠಕ ಎದುರಾಗುತ್ತಲೇ ಇದೆ. ನಾಲ್ಕು ವರ್ಷದ ನಂತರ ಶಾರುಖ್ ಖಾನ್ ಕಂಬ್ಯಾಕ್ ಮಾಡುತ್ತಿದ್ದಾರೆ.
ಸಿನಿಮಾಗಾಗಿ ಶಾರುಖ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಪಠಾಣ್ ಸಿನಿಮಾದಲ್ಲಿ ಹಿಂದೂಗಳಿಗೆ ದೀಪಿಕಾ ಕೇಸರಿ ಬಿಕಿನಿ ತೊಟ್ಟಿರುವುದು ಸಮಸ್ಯೆಯಾಗಿತ್ತು. ಇದೀಗ ಪಠಾಣ್ ಎನ್ನುವ ಹೆಸರಿದ್ದು, ಗೌರವಾನ್ವಿತವಾಗಿ ನಡೆದುಕೊಂಡಿಲ್ಲ ಎಂದು ಮುಸಲ್ಮಾನರು ಸಿಟ್ಟಾಗಿದ್ದಾರೆ.
ಇಷ್ಟೆಲ್ಲಾ ಆಗುತ್ತಿದ್ದರೂ ಶಾರುಖ್ ಮೌನವಾಗಿ ಇದ್ದಾರೆ. ಫ್ಯಾನ್ಸ್ ಸಿನಿಮಾ ಗೆಲ್ಲಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಇನ್ನೂ ಪ್ರಚಾರ ಸಿಕ್ಕಂತೆ ಆಗುತ್ತಿದೆ, ಸಿನಿಮಾ ಗೆಲ್ಲುತ್ತದೆ. ಸಿನಿಮಾಗಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ ಎನ್ನುತ್ತಿದ್ದಾರೆ ಶಾರುಖ್. ಶಾರುಖ್ ಖಾನ್ ದ್ವೇಷಿಗಳ ಸಂಖ್ಯೆ ಕಡಿಮೆಯಿಲ್ಲ ಆದರೆ ಅಭಿಮಾನಿಗಳ ಸಂಖ್ಯೆ ಇನ್ನೂ ಹೆಚ್ಚಿದೆ. ಹಾಗಾಗಿ ಸಿನಿಮಾ ಗೆಲ್ಲುವ ಸಾಧ್ಯತೆ ಹೆಚ್ಚಿದೆ.