Friday, December 9, 2022

Latest Posts

ಇಂದು ಫುಟ್ಬಾಲ್‌ ವಿಶ್ವಕಪ್ ಗೆ ಅದ್ಧೂರಿ ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಕತಾರ್-‌ ಈಕ್ವೆಡಾರ್‌ ಸೆಣಸಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮಧ್ಯಪ್ರಾಚ್ಯ ರಾಷ್ಟ್ರ ಕತಾರ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರೀಡೋತ್ಸವಗಳಲ್ಲಿ ಒಂದಾದ ಫಿಫಾ ಫುಟ್‌ಬಾಲ್ ವಿಶ್ವಕಪ್ ಗೆ ಇಂದು ಅದ್ಧೂರಿ ಚಾಲನೆ ಸಿಗಲಿದೆ. ದೋಹಾ ಸಮೀಪದ ಅಲ್​ಬೇತ್ ಕ್ರೀಡಾಂಗಣದಲ್ಲಿ ಕೂಟದ ಉದ್ಘಾಟನಾ ಸಮಾರಂಭವು ನಡೆಯಲಿದೆ. ಆ ಬಳಿಕ ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ.
ಇಂದು ಸಂಜೆ 7.30 ಕ್ಕೆ (ಭಾರತೀಯ ಕಾಲಮಾನ) ಉದ್ಘಾಟನಾ ಸಮಾರಭದ ಸಂಭ್ರಮ ಮೇಳೈಸಲಿದೆ. ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ಪ್ರಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಕೊರಿಯನ್ ಮೂಲಕ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್ ಬಿಟಿಎಸ್‌ ಸೇರಿದಂತೆ ಪ್ರಸಿದ್ಧ ಜಾಗತಿಕ ಗಾಯಕರು ಮತ್ತು ಕಲಾವಿದರ ಪ್ರದರ್ಶನಗಳಿರಲಿವೆ.
ಭವ್ಯವಾದ ಉದ್ಘಾಟನಾ ಸಮಾರಂಭದಲ್ಲಿ ಆತಿಥೇಯ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವೈಶಿಷ್ಟ್ಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಆತಿಥೇಯ ಕತಾರ್ ಅಲ್ ಖೋರ್‌ನ ಅಲ್ ಬೇತ್ ಕ್ರೀಡಾಂಗಣದಲ್ಲಿ ಈಕ್ವೆಡಾರ್ ತಂಡವನ್ನು ಎದುರಿಸಲಿದೆ. ಪಂದ್ಯವಳಿಯಲ್ಲಿ ವಿಶ್ವದ 32 ತಂಡಗಳನ್ನು ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಕತಾರ್ ನ ಎಂಟು ಕ್ರೀಡಾಂಗಣಗಳು ಕ್ರೀಡಾಹಬ್ಬಕ್ಕೆ ಸಜ್ಜಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!