ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಫಾ ವಿಶ್ವಕಪ್ ಟೂರ್ನಿಯು ಬಹಳ ಸಂಭ್ರಮದಿಂದ ನಡೆಯುತ್ತಿದ್ದು, ಬುಧವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡ 2-1 ಗೋಲುಗಳಿಂದ ನಾಲ್ಕು ಬಾರಿಯ ಚಾಂಪಿಯನ್ ಹಾಗೂ ವಿಶ್ವಫುಟ್‌ಬಾಲ್‌ನ ದೈತ್ಯ ತಂಡಗಳಲ್ಲಿ ಒಂದಾದ ಜರ್ಮನಿಗೆ ಸೋಲುಣಿಸಿದೆ.
33ನೇ ನಿಮಿಷದಲ್ಲಿ ಇಲ್ಕೆ ಗುಂಡೋಗನ್ ಪೆನಾಲ್ಟಿ ಮೂಲಕ ಗೋಲು ಗಳಿಸುವ ಮೂಲಕ ಜರ್ಮನಿ ಗೋಲಿನ ಖಾತೆ ತೆರೆದಿತ್ತು. ಆದರೆ, ಜಪಾನ್ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು.
83ನೇ ನಿಮಿಷದಲ್ಲಿ ಅಸಾನೋ ಸೆನ್ಸೇಷನ್ ಗೋಲು ಬಾರಿಸುತ್ತಿದ್ದಂತೆ ಜಪಾನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಜರ್ಮನಿ ತಂಡದ ಆಟಗಾರರ ಮುಖದಲ್ಲಿ ಆಘಾತ ಕಾಣಿಸಿತು.