ಪ್ರೊ ಕಬಡ್ಡಿ ಲೀಗ್‌: ದಬಾಂಗ್‌ ಡೆಲ್ಲಿ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವನ್ನು ಬೆಂಗಳೂರು ಬುಲ್ಸ್‌ ತಂಡ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಮಂಗಳವಾರ ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ 56-24 ಅಂಕಗಳಿಂದ ದಬಾಂಗ್‌ ಡೆಲ್ಲಿ ತಂಡವನ್ನು ಬೆಂಗಳುರು ಬುಲ್ಸ್‌ ಸೋಲಿಸಿತು.
ಗುರುವಾರ ನಡೆಯಲಿರುವ ಉಪಾಂತ್ಯ ಕದನದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಬೆಂಗಳೂರು ಎದುರಿಸಲಿದೆ.
ಬೆಂಗಳೂರು ತಂಡದ ಗೆಲುವಿನಲ್ಲಿ ರೈಡರ್‌ಗಳಾದ ಭರತ್‌ ಹಾಗೂ ವಿಕಾಸ್‌ ಖಂಡೋಲಾ, ತಂಡದ 56 ಅಂಕಗಳ ಪೈಕಿ 28 ಅಂಕಗಳನ್ನು ಸಂಪಾದನೆ ಮಾಡಿದರು. ಭರತ್‌ ಬರೋಬ್ಬರಿ 15 ಅಂಕ ಸಂಪಾದನೆ ಮಾಡಿದರೆ, ವಿಕಾಸ್‌ ಖಂಡೋಲಾ 13 ಅಂಕ ಗಳಿಸಿದರು. ಪೊನ್‌ ಪಾರ್ತಿಬನ್‌ ಸುಬ್ರಮಣ್ಯಂ ಡಿಫೆಂಡಿಂಗ್‌ ವಿಭಾಗದಲ್ಲಿ ಗಳಿಡಿದ 7 ಅಂಕಗಳು ಬುಲ್ಸ್‌ ಅಬ್ಬರಕ್ಕೆ ಸಾಕ್ಷಿ ಎನಿಸುವಂತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!