ಐದಂತಸ್ತಿನ ಕಟ್ಟಡದ ಸ್ಲ್ಯಾಬ್​ ಕುಸಿತ: 7 ಜನರಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈನ ನೆರೂಲ್​ನಲ್ಲಿ ಐದಂತಸ್ತಿನ ಕಟ್ಟಡದ ಸ್ಲ್ಯಾಬ್​ಗಳು ಕುಸಿದಿದ್ದು, ಘಟನೆಯಲ್ಲಿ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವಿ ಮುಂಬೈನ ನೆರೂಲ್ ಪ್ರದೇಶದ ಸೆಕ್ಟರ್ 17ರಲ್ಲಿ ಜಿಮ್ಮಿ ಪಾರ್ಕ್ ಹೆಸರಿನ ಕಟ್ಟಡದ ಐದು ಸ್ಲ್ಯಾಬ್​ಗಳು ಏಕಾಏಕಿ ಕುಸಿದಿವೆ. ಐದು ಸ್ಲ್ಯಾಬ್​ಗಳು ಏಕಕಾಲಕ್ಕೆ ಕುಸಿದಿರುವುದು ಕಟ್ಟಡಕ್ಕೆ ಭಾರೀ ಅಪಾಯ ತಂದೊಡ್ಡಿದ್ದು, ಸ್ಲ್ಯಾಬ್​ನ ಅಡಿಯಲ್ಲಿ ಸಿಲುಕಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ.
ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿರುವ ಜನರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!