September 22, 2026
Tuesday, September 22, 2026
spot_img

ದೊಡ್ಡ ತರಕಾರಿ ಬುಟ್ಟಿಯಲ್ಲಿ ಐವರು ಮಕ್ಕಳನ್ನು ಕೂರಿಸಿಕೊಂಡು ಹೊರಟ ತಂದೆ: ನೆಟ್ಟಿಗರಿಂದ ಕ್ಲಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟು ವ್ಹೀಲರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವಾಗ ತಲೆಯ ಮೇಲೆ ಹೆಲ್ಮೆಟ್‌ ಇಲ್ಲವಾದರೆ ಪೊಲೀಸ್‌ ಫೈನ್‌ ಹಾಕ್ತಾರೆ, ಜನ ಅವರನ್ನು ಬೈದು ಮಕ್ಕಳಿಗೆ ಹೆಲ್ಮೆಟ್‌ ಹಾಕಿಸಿ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಬೈಕ್‌ಗೆ ದೊಡ್ಡ ತರಕಾರಿ ಬುಟ್ಟಿ ಒಂದನ್ನು ಕಟ್ಟಿಕೊಂಡು ಅದರಲ್ಲಿ ಐವರು ಮಕ್ಕಳನ್ನು ಕೂರಿಸಿಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಮಕ್ಕಳ ಜೀವಕ್ಕೆ ಬೆಲೆ ಇಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ.

ಟಿವಿಎಸ್‌ ಎಕ್ಸ್‌ಎಲ್‌ ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ ಐವರು ಮಕ್ಕಳನ್ನು ಕೂರಿಸಿಕೊಂಡು ಮೈಸೂರು-ನಂಜನಗೂಡು ರಸ್ತೆಯಲ್ಲಿ ಹೋಗಿದ್ದನ್ನು ಹಿಂಬದಿಯಿಂದ ಬರುತ್ತಿದ್ದ ಕಾರ್‌ನಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಹಿಂಬದಿ ನಾಲ್ಕು ಮಕ್ಕಳು ಹಾಗೂ ಬೈಕ್‌ನ ಮುಂಬದಿಯಲ್ಲಿ ಒಂದು ಮಗುವನ್ನು ಕೂರಿಸಿಕೊಂಡು ತಾನು ಹೆಲ್ಮೆಟ್‌ ಹಾಕಿಕೊಂಡು ಮಕ್ಕಳ ಸೇಫ್ಟಿಯನ್ನು ಗಾಳಿಯಲ್ಲಿ ತೂರಲಾಗಿದೆ.

ಭಾನುವಾರದಂದು ಈ ಘಟನೆ ನಡೆದಿದ್ದು, ಇಂಥ ರಶ್‌ ಅವಧಿಯಲ್ಲಿ ಊಟಿ ಮುಖ್ಯ ರಸ್ತೆ ಕಡೆ, ಚಳಿ, ಗಾಳಿ ಎನ್ನದೆ ಮಕ್ಕಳನ್ನು ಪಂಜರದೊಳಗೆ ಕೂರಿಸಿಕೊಂಡು ಹೋಗ್ತಾ ಇದ್ದಾರೆ. ಇದು ಸರಿಯಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇಷ್ಟು ಪುಟ್ಟ ಕಂದಮ್ಮಗಳಿಗೆ ಒಂದೇ ಆಂಗಲ್‌ನಲ್ಲಿ ಎಷ್ಟು ಹೊತ್ತು ಕೂರೋಕೆ ಸಾಧ್ಯ? ಸ್ವಲ್ಪ ಕಾಲು ಅಲುಗಾಡಿಸಲೂ ಜಾಗವಿಲ್ಲ. ಕೋಳಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿದಂತೆ ಕಾಣಿಸುತ್ತಿದೆ. ಅದರಲ್ಲಿಯೂ ಬೈಕ್‌ ಸ್ಪೀಡ್‌ ತುಸು ಹೆಚ್ಚೇ ಇದೆ ಎಂದು ಜನ ಕಮೆಂಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !