Friday, March 1, 2024

ಪಂಚಮಸಾಲಿ ಮೀಸಲಾತಿಗಾಗಿ ಮತ್ತೆ ಹೋರಾಟ

ಹೊಸದಿಗಂತ ವರದಿ ಹಾವೇರಿ:

ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರ ರಾಷ್ಟ್ರೀಯ ಹೆದ್ದಾರಿ ಮೇಲೆ ಜ.12 ಕ್ಕೆ ಲಿಂಗಪೂಜೆ ನಡೆಸಿ, ನಂತರ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಲಿಂಗಾಯತ ಪಂಚಮಸಾಲಿ
ಮೀಸಲಾತಿಗಾಗಿ ಕೊನೆಯ ಹಂತ ಹೋರಾಟಕ್ಕೆ ಸಿದ್ದತೆ ನಡೆದಿದೆ.

ಲಿಂಗಾಯತ ಪಂಚಮಸಾಲಿ ಹೋರಾಟ 3 ದಶಕದಿಂದ ಮಾಡಲಾಗುತ್ತಿದೆ. ಕಳೆದ ಬಾರಿ ಸಿಎಂ 2D ಮೀಸಲಾತಿ ಘೋಷಿಸಿದರು. ಕಾನೂನು ತೊಡಕಿನಿಂದ 2D ಮೀಸಲಾತಿ ಜಾರಿಗೆ ಬರಲಿಲ್ಲ

ನಮ್ಮ ಸಮುದಾಯದ ಶಾಸಕರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಬೆಳಗಾವಿ ಚಳಿಗಾಲದ ಅಧಿವೇಶದ ಬಳಿಕ ಮೀಟಿಂಗ್ ಮಾಡೋದಾಗಿ ಸಿಎಂ ಹೇಳಿದ್ದರು. ಸರ್ಕಾರದ ಮೀಟಿಂಗ್ ನಡೆಯುವ ಹಂತ ತಡವಾದ ಹಿನ್ನೆಲೆ 6ನೇ ಹಂತದ ಹೋರಾಟಕ್ಕೆ ನಾವು ಸಿದ್ದರಾಗಿದ್ದೇವೆ. ಹಾವೇರಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಮೀಸಲಾತಿ ಕುರಿತು ಜಾಗೃತಿ ಮೂಡಿಸಲಾಗುವುದು.

ಬೆಳಗಾವಿ, ಬಾಗಲಕೋಟ, ಕೊಪ್ಪಳ, ರಾಯಚೂರು ಸೇರಿ 5 ಜಿಲ್ಲೆಯಲ್ಲಿ ಹೋರಾಟ ಮಾಡಲಾಗಿದೆ. ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ನಡೆಸಿ, ಮೊಟೇಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೊಜೆಗೈದು ಧರಣಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.
ಈ ವೇಳೆ ಬಸವರಾಜ ಹಾಲಪ್ಪನವರ, ಭಾರತಿ ಜಂಬಗಿ ಸೇರಿದಂತೆ ಹಲವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!