ಸುಡಾನ್‌ನಲ್ಲಿ ಸೇನಾ ಸಂಘರ್ಷ: ಮುಂದುವರಿದ ಘರ್ಷಣೆ, ಮೃತರ ಸಂಖ್ಯೆ 100ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಫ್ರಿಕನ್‌ ರಾಷ್ಟ್ರ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಸತ್ತವರ ಸಂಖ್ಯೆ 97ಕ್ಕೆ ಏರಿದೆ ಎಂದು ಸುಡಾನ್ ವೈದ್ಯರ ಒಕ್ಕೂಟವನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಸೋಮವಾರದಂದು ಲಭ್ಯವಾದ ಮಾಹಿತಿ ಅನುಸಾರ ಹಿಂಸಾಚಾರದಲ್ಲಿ 97 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 600 ಜನರು ಗಾಯಗೊಂಡಿದ್ದಾರೆ.

ಭಾನುವಾರದಂದು ಬೆಳಗ್ಗೆ ಪ್ರಾರ್ಥನೆಯ ನಂತರ ಹೋರಾಟ ತೀವ್ರ ಸ್ವರೂಪ ಪಡೆಯಿರು. ರಾತ್ರಿಯಿಡೀ ದೊಡ್ಡ ಶಬ್ದಗಳು ಮತ್ತು ಸ್ಫೋಟಗಳು ಕೇಳಿಬಂದವು ಎಂದು ರಾಜಧಾನಿ ಖಾರ್ಟೌಮ್‌ನಲ್ಲಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುಡಾನ್‌ನಲ್ಲಿ ಸೇನಾ ಸಂಘರ್ಷ ಘಟನೆಯ ಹಿನ್ನೆಲೆ :

ಖಾರ್ಟೂಮ್ ನಲ್ಲಿರುವ ಅಧ್ಯಕ್ಷರ ನಿವಾಸ, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಅರೆಸೇನಾ ಪಡೆ ವಶದಲ್ಲಿವೆ ಎಂದು ಘೋಷಿಸುತ್ತಿದ್ದಂತೆ ಸುಡಾನ್‌ ಸೇನೆ ಪಡೆ ದಾಳಿ ಮಾಡಿದೆ. ಹೀಗಾಗಿ ಬಾಂಬ್‌ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಎರಡು ಸೇನಾಪಡೆ ದಾಳಿ ಮಾಡಿದ್ದರಿಂದ ಈ ಘರ್ಷಣೆ ಸಂಭವಿಸಿದೆ.

ಶನಿವಾರ ಬೆಳಗ್ಗಿನಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ನಡೆಯುತ್ತಿದ್ದ ಸೈನಿಕರ ಸಂಘರ್ಷ ತದನಂತರ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಗುಂಡಿನ ಚಕಮಕಿಯಿಂದಾಗಿ ಸಾವುನೋವಿಗೀಡಾದ ಅಮಾಯಕ ನಾಗರಿಕರ ಸಂಖ್ಯೆಗಳನ್ನು ಮಾತ್ರ ಪ್ರಕಟಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!