ಪಕ್ಷ ತೊರೆದ ಶೆಟ್ಟರ್‌ಗೆ ಈಶ್ವರಪ್ಪ ಬಹಿರಂಗ ಪತ್ರ!

ಹೊಸದಿಗಂತ ವರದಿ ಶಿವಮೊಗ್ಗ:

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಯನ್ನು ಖಂಡಿಸಿರುವ ಶಾಸಕ ಕೆ.ಎಸ್.ಈಶ್ವರಪ್ಪ, ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸೇರ್ಪಡೆ ಆಗಿರುವ ಜಗದೀಶ್ ಶೆಟ್ಟರ್ ಪಿಎಫ್‌ಐ ನಿಷೇಧ ವಾಪಾಸ್ ಪಡೆಯುವುದು ಹಾಗೂ ಗೋ ಹತ್ಯೆ ನಿಷೇಧ ವಾಪಾಸ್ ಪಡೆಯುವ ಕಾಂಗ್ರೆಸ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರಾ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್ ನಡೆ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. ಅವರು ಕೂಡಲೇ ತಮಗೆ ಸಂಸ್ಕಾರ ಕೊಟ್ಟ ಹಿರಿಯರ ಕ್ಷಮೆ ಕೇಳಬೇಕು. ತಮ್ಮ ಸಿದ್ಧಾಂತಕ್ಕೆ ವಾಪಸ್ ಬರಬೇಕು ಎಂದು ಒತ್ತಾಯಿಸಿದರು.
ಜಗದೀಶ್ ಶೆಟ್ಟರ್ ಅವರ ತಂದೆ ಜನಸಂಘದಿಂದ ಬಂದವರು. ಅದೇ ಕಾರಣಕ್ಕೆ ಶಾಸಕರಾಗಿ ಆಯ್ಕೆ ಆಗಿದ್ದರು.

ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುವಾಗ ಬಿಜೆಪಿಯಲ್ಲಿ ಅಭ್ಯರ್ಥಿ ಗಳೇ ಇರಲಿಲ್ಲ. ಆಗ ಅಧಿಕಾರಕ್ಕೆ ಬರುವ ವಿಶ್ವಾಸವೂ ಇರಲಿಲ್ಲ. ಶಾಸಕ, ಮಂತ್ರಿ, ಮುಖ್ಯಮಂತ್ರಿವರೆಗೆ ಹುದ್ದೆಗಳು ಲಭಿಸಿದ್ದರೆ ಅದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ. ಇದನ್ನು ಯಾವತ್ತೂ ಶೆಟ್ಟರ್ ಮರೆಯಬಾರದು ಎಂದರು.

ಬಿಜೆಪಿ ಇವರಿಗೆ 06 ಬಾರಿ ಟಿಕೇಟ್ ನೀಡಿದೆ. ಕಾರ್ಯಕರ್ತರು ಶ್ರಮ ಹಾಕಿ ಗೆಲ್ಲಿಸಿದ್ದಾರೆ. ರಾಜ್ಯಾಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ. ಇನ್ನೇನು ಕೊಡಬೇಕಿತ್ತು ಇವರಿಗೆ? ಚೆನ್ನಾಗಿ ನಡೆಸಿಕೊಂಡಿಲ್ಲ ಎಂದರೆ ಏನರ್ಥ? ಎಂದು ಪ್ರಶ್ರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!