ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ಗಳ ನಡುವೆ ಮಾರಾಮಾರಿ: ಸಿಧು ಮೂಸೆವಾಲ ಹತ್ಯೆಯ ಇಬ್ಬರು ಆರೋಪಿಗಳು ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಂಜಾಬ್‌ನ (Punjab) ಗೋಯಿಂಡ್ವಾಲ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಸಿಧು ಮೂಸೆವಾಲ (Sidhu Moosewala) ಹತ್ಯೆಯ ಆರೋಪಿಗಳಾಗಿರುವ ಇಬ್ಬರು ಕೈದಿಗಳು ಭಾನುವಾರ ಸಾವನ್ನಪ್ಪಿದ್ದಾರೆ.

ಮೃತರನ್ನು ಬಟಾಲದ ಮನದೀಪ್ ಸಿಂಗ್ ಅಲಿಯಾಸ್ ತೂಫಾನ್ ಮತ್ತು ಬುಧಲಾನಾದ ಮನಮೋಹನ್ ಸಿಂಗ್ ಅಲಿಯಾಸ್ ಮೊಹ್ನಾ ಎಂದು ಗುರುತಿಸಲಾಗಿದೆ.

ಮತ್ತೋರ್ವ ಕೈದಿಯನ್ನು ಬಟಿಂಡಾದ ಕೇಶವ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಈತನನ್ನು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಮೂವರೂ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

28 ವರ್ಷದ ಗಾಯಕ ಸಿಧು ಮೂಸೆವಾಲ ಅವರನ್ನು ಮೇ 29, 2022 ರಂದು ರಾಜ್ಯ ಸರ್ಕಾರವು ಅವರ ಭದ್ರತೆಯನ್ನು ಮೊಟಕುಗೊಳಿಸಿದ ಒಂದು ದಿನದ ನಂತರ ಗುಂಡಿಕ್ಕಿ ಕೊಲ್ಲಲಾಯಿತು. ಮೂಸೆವಾಲ ಮೇಲೆ ದುಷ್ಕರ್ಮಿಗಳು 30 ಸುತ್ತು ಗುಂಡು ಹಾರಿಸಿದ್ದಾರೆ.

ಈ ಹತ್ಯೆಯ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯ್ ಎಂದು ತನಿಖೆ ಸೂಚಿಸಿದೆ. ಆತ ಕೆನಡಾದಲ್ಲಿ ನೆಲೆಸಿದ್ದು, ಈತನ ಆಪ್ತ ಸಹಾಯಕ ಗೋಲ್ಡಿ ಬ್ರಾರ್ ಕೂಡ ಈ ಪ್ರಕರಣದಲ್ಲಿ ತನಿಖೆಗೊಳಗಾಗಿದ್ದ. ನವೆಂಬರ್ 23 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆಯು ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯುವಕರನ್ನು ನೇಮಿಸಿಕೊಳ್ಳಲು ಸಂಚು ರೂಪಿಸಿದ ಆರೋಪದ ಪ್ರಕರಣದಲ್ಲಿ ಬಿಷ್ಣೋಯ್ ನ್ನು ಬಂಧಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!