ಮಹಿಳಾ ಟಿ20 ವಿಶ್ವಕಪ್​ ಫೈನಲ್: ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಹಿಳಾ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದ ಹಾಲಿ ಚಾಂಪಿಯನ್ ​ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ನಿರ್ಧಾರ ಕೈಗೊಂಡಿದೆ.

ಕೇಪ್​ಟೌನ್​ನ ನ್ಯೂಲ್ಯಾಂಡ್ಸ್‌​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ದಕ್ಷಿಣ ಆಪ್ರಿಕಾ ವನ್ನು ಕಾಂಗರೂ ಪಡೆ ಎದುರಿಸಲಿದೆ.

ಆಸ್ಟ್ರೇಲಿಯಾ ಮಹಿಳಾ ತಂಡ 2009ರ ಚೊಚ್ಚಲ ವಿಶ್ವ ಕಪ್‌ ಹೊರತು ಪಡಿಸಿದರೆ ವಿಶ್ವಕಪ್‌ ಫೈನಲ್‌ ಮಿಸ್‌ ಮಾಡಿ ಕೊಂಡದ್ದಿಲ್ಲ. 6 ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿ 5 ಸಲ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಹ್ಯಾಟ್ರಿಕ್​ ಕಪ್​ ಗೆದ್ದ ಸಾಧನೆ ಮಾಡಲಿದೆ. ದಕ್ಷಿಣ ಆಪ್ರಿಕಾ ಗೆದ್ದರೆ ಚೊಚ್ಚಲ ವಿಶ್ವ ಕಪ್​ ಜತೆಗೆ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!