ಹೊಸದಿಗಂತ ವರದಿ, ಮಂಗಳೂರು:
ಪ್ರಮುಖ ಬಂದರುಗಳ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿ ಕೇಂದ್ರೀಯ ಬಂದರು ಇಲಾಖೆ ಸಚಿವರ ಮದ್ಯಸ್ತಿಕೆಯಲ್ಲಿ ಇಂಡಿಯನ್ ಪೋರ್ಟ್ ಅಸೋಸಿಯೇಷನ್ ಹಾಗು ರಾಷ್ಟ್ರೀಯ ೬ ಕಾರ್ಮಿಕ ಫೆಡರೇಷನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರಿನ ಬಿಎಂಎಸ್ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಹಾಗೂ ಸದಸ್ಯರು ಗುರುವಾರ ವಿಜಯೋತ್ಸವ ಆಚರಿಸಿದರು.
ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪೋರ್ಟ್ ಫೆಡರೇಷನ್ ಪದಾಧಿಕಾರಿಗಳು ಭಾರತ ಸರ್ಕಾರದ ಬಂದರು ಖಾತೆ ಸಚಿವ ಸರ್ಬಾನಂದ್ ಸೋನಾವಲ್ ಹಾಗೂ ಶಾಂತನು ಟಾಕುರ್ ರವರನ್ನು ಭೇಟಿ ಮಾಡಿ ಮನವಿ ಕೊಟ್ಟು ಚರ್ಚಿಸಿದ ಪ್ರತಿಫಲವಾಗಿ ಈ ವೇತನ ಪರಿಷ್ಕರಣೆ ಸಾಧ್ಯ ವಾಗಿದೆ ಎಂದು ನವ ಮಂಗಳೂರು ಬಂದರು ಬಿಎಂಎಸ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ನಾಯ್ಕ್ ತಿಳಿಸಿದ್ದಾರೆ.
ಸಂಘಟನೆಯ ಕಾರ್ಯಧ್ಯಕ್ಷ ರಮೇಶ್ ಭಂಡಾರಿ ಬೊಟ್ಯಾಡಿ ಮಾತನಾಡಿ ವೇತನ ಪರಿಷ್ಕರಣೆಗೆ ಸಹಕರಿಸಿದ ಬಂದರು ಸಚಿವರಿಗೆ ಅಭಿನಂದನೆಗಳು ಸಲ್ಲಲೇಬೇಕು ಎಂದರು.
ಈ ಸಂದರ್ಭ ಪ್ರಮುಖರಾದ ಭರತ್ ಕುಮಾರ್, ರವಿಚಂದ್ರ ಸುವರ್ಣ , ಕಿಶೋರ್, ಚಂದ್ರ ನಾಯ್ಕ್, ಅರ್ಜುನ್, ಶಶಿಧರ್, ನಾರಾಯಣ್ ನಾಯ್ಕ್, ಸಂಜಯ್, ವೆಂಕಪ್ಪ ನಾಯ್ಕ್, ಶ್ರೀನಿವಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು.
ಬಂದರು ಇಲಾಖೆ ಸಚಿವ ಸರ್ಬಾನಂದ ಸೋನಾವಾಲ್ ಅವರನ್ನು ಭಾರತೀಯ ಪೋರ್ಟ್ ಆಂಡ್ ಡಾಕ್ ಮಾಜ್ದೂರ್ ಮಹಾಸಂಗ್ ಇದರ ಪದಾಧಿಕಾರಿಗಳು, ಸುರೇಶ್ ಪಾಟೀಲ್ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಇದೇ ಸಂಘಟನೆಗೆ ಸಾರಿಗೆ ನೌಕರರಿಗೆ ತಮ್ಮದೇ ಪಕ್ಷದ ಆಡಳಿತ ಇರುವಾಗ ನ್ಯಾಯ ಕೊಡಿಸಲು ಆಗದೇ ಇರುವುದಕ್ಕೆ ಈಗ ಏನಂತ ಉತ್ತರ ಕೊಡುತ್ತಾರೆ