September 27, 2026
Sunday, September 27, 2026
spot_img

ನೀರಿಗಾಗಿ ಹೋರಾಟ, ಇಂದು ಕಾವೇರಿ ನಿಗಮದ ಕಚೇರಿಗೆ ಮಂಡ್ಯ ರೈತರಿಂದ ಮುತ್ತಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಮುಂಗಾರು ಹೆಸರಿಗೆ ಮಾತ್ರ ಆರಂಭವಾಗಿದೆ, ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಮಳೆ ಬೀಳದೇ ಬರದ ಛಾಯೆಯಿದೆ. ಇನ್ನು ತಮ್ಮ ಕಬ್ಬ ಬೆಳೆಯ ರಕ್ಷಣೆಗಾಗಿ ನಾಲೆಗೆ ನೀರು ಬಿಡಿ ಎಂದು ಆಗ್ರಹರಿಸಿ ಕಾವೇರಿ ನೀರಾವರಿ ನಿಗಮದ ಕಚೇರಿ ರೈತರು ಮುತ್ತಿಗೆ ಹಾಕಲಿದ್ದಾರೆ.

ಜಿಲ್ಲೆಯಲ್ಲಿ ಮಳೆಯೂ ಆಗುತ್ತಿಲ್ಲ, ನಾಲೆಯಲ್ಲೂ ನೀರಿಲ್ಲ ಎಂದಾದರೆ ನಮ್ಮ ಕಬ್ಬು ಬೆಳೆ ಒಣಗಿಹೋಗುತ್ತದೆ. ಈ ಕೂಡಲೇ ನಾಲೆಗೆ ನೀರು ಹರಿಸಿ ಎಂದು ಒತ್ತಾಯಿಸಿ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

ಸಾಲ ಸೂಲ ಮಾಡಿ ಬೆಳೆದಿರುವ ಕಬ್ಬು ಒಣಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈಗ ನಾಲೆಗೆ ನೀರು ಹರಿಸದಿದ್ದರೆ ರೈತರಿಗೆ ತೀವ್ರ ಸಂಕಷ್ಟ ಎದುರಾಗುತ್ತದೆ. ಕೂಡಲೇ ನಾಲೆಗೆ ನೀರು ಹರಿಸಿ ಎಂದು ಪ್ರತಿಭಟನೆ ಮಾಡಲಿದ್ದಾರೆ. ಆದರೆ ಮತ್ತೊಂದೆಡೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಡ್ಯಾಂ ನೀರು ಬಳಕೆಗೆ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, ಸದ್ಯ ರೈತರ ಆಗ್ರಹಕ್ಕೆ ಜಿಲ್ಲಾಡಳಿತ ಮಣಿಯುತ್ತಾ ಎಂದು ಕಾದುನೋಡಬೇಕಿದೆ.

Must Read