ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಕಿತ್ತಾಟ ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ. ಚನ್ನಪಟ್ಟಣದ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಪುನೀತ್ ಒಂಬತ್ತನೇ ತರಗತಿ ವಿದ್ಯಾರ್ಥಿ ರಾಹುಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸಣ್ಣಪುಟ್ಟ ವಿಷಯಕ್ಕೆ ಪುನೀತ್ ಹಾಗೂ ರಾಹುಲ್ ನಡುವೆ ಗಲಾಟೆ ಆರಂಭವಾಗಿದೆ. ಪುನೀತ್ ಶಾಲೆಯ ಲೀಡರ್ ಆಗಿದ್ದು, ಧಿಮಾಕಿನ ವರ್ತನೆ ತೋರುತ್ತಿದ್ದ ಎನ್ನಲಾಗಿದೆ. ರಾಹುಲ್ ವಾಲಿಬಾಲ್ ಆಡುವ ವೇಳೆ ಪುನೀತ್ ಅಲ್ಲಿಯೇ ಕುಳಿತಿದ್ದ.
ನನ್ನ ಕಾಲಿಗೆ ವಾಲಿಬಾಲ್ ತಾಗಿದರೆ ಸರಿಯಾಗಿರುವುದಿಲ್ಲ ಎಂದು ಪುನೀತ್ ಹೇಳಿದ್ದಾನೆ, ಅದಾಗ್ಯೂ ಮಿಸ್ ಆಗಿ ಬಾಲ್ ಕಾಲಿಗೆ ತಗುಲಿದ್ದು, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೇ ಯಾರಿಗಾದರೂ ಹೇಳಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು ವಾರ್ನ್ ಮಾಡಿದ್ದಾನೆ. ರಾಹುಲ್ ಪೋಷಕರಿಗೆ ಮಾಹಿತಿ ನೀಡಿದ್ದು, ದೂರು ದಾಖಲಾಗಿದೆ.