ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಾಗ್ವಾದ ನಡೆಸಿ ಹೊಡೆದಾಡಿಕೊಂಡ ಘಟನೆ ನಡೆದಿದೆ.
ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಮಾನದ ಸಿಬ್ಬಂದಿ ಜಗಳವಾಡುತ್ತಿರುವವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಪುರುಷರಲ್ಲಿ ಒಬ್ಬಾತ ʼಶಾಂತಿ ಸೆ ಬಾತ್ ಕರ್ʼ (ಸಮಾಧಾನವಾಗಿ ಮಾತನಾಡಿ) ಎಂದು ಹೇಳುವುದನ್ನು ಕೇಳಬಹುದು. ಆದರೆ ಇನ್ನೊಬ್ಬರು “ಹತ್ ನೀಚೆ ಕರ್” (ನಿನ್ನ ಕೈಯನ್ನು ಕೆಳಕ್ಕೆ ಇಳಿಸು) ಎಂದು ಹೇಳುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ, ಇಬ್ಬರ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಒಬ್ಬ ವ್ಯಕ್ತಿ ಕೋಪದಿಂದ ಮತ್ತೊಬ್ಬನನ್ನು ಹೊಡೆಯುತ್ತಾನೆ. ಹೊಡೆಸಿಕೊಂಡ ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ನಂತರ ಇನ್ನೊಬ್ಬ ವ್ಯಕ್ತಿಗೆ ಹಿಗ್ಗಾಮುಗ್ಗ ಬಾರಿಸುವುದನ್ನು ಕಾಣಬಹುದಾಗಿದೆ. ಆದಾಗ್ಯೂ, ಇನ್ನೊಬ್ಬ ವ್ಯಕ್ತಿ ಮತ್ತೆ ಹೊಡೆಯಲಿಲ್ಲ ಮತ್ತು ತನ್ನ ಕೈಗಳನ್ನು ಅಡ್ಡ ಇಟ್ಟು ಏಟಿನಿಂದ ರಕ್ಷಿಸಿಕೊಳ್ಳುವುದನ್ನು ಕಾಣಬಹುದಾಗಿದೆ.

ಕೆಲವು ಫ್ಲೈಟ್ ಅಟೆಂಡೆಂಟ್‌ಗಳು ಇಬ್ಬರನ್ನು ಜಗಳದಿಂದ ಯಶಸ್ವಿಯಾಗಿ ಬೇರ್ಪಡಿಸುವ ಮೊದಲು ಸಹ-ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಕೇಳಿಕೊಳ್ಳುವುದನ್ನು ಕೇಳಬಹುದು. ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ, ಥಾಯ್ ಸ್ಮೈಲ್ ಏರ್‌ವೇಸ್ ಈ ಸಮಸ್ಯೆಗೆ ಪ್ರತಿಕ್ರಿಯಿಸಿಲ್ಲ ಮತ್ತು ಪ್ರಯಾಣಿಕರ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!