ಟೆಸ್ಲಾ ಶೇರು ಕುಸಿತ: ಆತಂಕದಲ್ಲಿರುವ ಉದ್ಯೋಗಿಗಳಿಗೆ ಹೆದರಬೇಡಿ ಎಂದ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಟ್ವೀಟರ್‌ ಅನ್ನು ಖರೀದಿಸಿರುವ ಮಸ್ಕ್‌ ಖರೀದಿ ಮಾಡಿದಾಗಿನಿಂದ ಟ್ವೀಟರ್‌ ನಲ್ಲಿಯೇ ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಟ್ವೀಟರ್‌ ಅನ್ನು ಸ್ಥಿರವಾಗಿ ನಿಲ್ಕಿಸುವವರೆಗೂ ಅಲ್ಲಿಯೇ ಜಾಸ್ತಿ ಇರುವುದಾಗಿ ಮಸ್ಕ್‌ ಹೇಳಿದ್ದಾರೆ. ಅವರ ಈ ನಡೆ ಟೆಸ್ಲಾ ಹೂಡಿಕೆದಾರರು ಮತ್ತು ಉದ್ಯೋಗಿಗಳನ್ನು ಚಿಂತೆಗೀಡು ಮಾಡಿದೆ. ಮಸ್ಕ್‌ ಟೆಸ್ಲಾ ನೋಡಿಕೊಳ್ಳೋದು ಯಾವಾಗ ಎಂದು ಹೂಡಿಕೆದಾರರು ಪ್ರಶ್ನೆ ಮಾಡುತ್ತಿದ್ದಾರೆ.

ಟ್ವೀಟರ್‌ ಖರೀದಿಯ ಘೋಷಣೆಯ ಸಂದರ್ಭದಿಂದಲೇ ಇಳಿಮುಖವಾಗಿರುವ ಟೆಸ್ಲಾ ಶೇರುಗಳು ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದಿದೆ. ಇಲ್ಲಿಯವರೆಗೆ ಸುಮಾರು 70 ಶೇಕಡಾದಷ್ಟು ಕುಸಿತ ಕಂಡಿದ್ದು ಟೆಸ್ಲಾ ಉದ್ಯೋಗಿಗಳು ಚಿಂತಿತರಾಗಿದ್ದಾರೆ. ಆದರೆ ಈ ಕುರಿತು ಮಸ್ಕ್‌ ಅವರಿಗೆ ಧೈರ್ಯ ನೀಡಿದ್ದು ʼಮಾರುಕಟ್ಟೆ ಹುಚ್ಚಾಟಗಳಿಗೆ ತೆಲಕೆಡಿಸಿಕೊಳ್ಳಬೇಡಿʼ ಎಂದಿದ್ದಾರೆ ಎನ್ನಲಾಗಿದೆ. ಬುಧವಾರ ಸಿಬ್ಬಂದಿಗೆ ಕಳುಹಿಸಿದ ಇಮೇಲ್‌ನಲ್ಲಿ ದೀರ್ಘಾವಧಿಯಲ್ಲಿ ಟೆಸ್ಲಾ ಭೂಮಿಯ ಮೇಲಿನ ಅತ್ಯಮೂಲ್ಯ ಕಂಪನಿಯಾಗಿದೆ ಎನ್ನುವ ಮೂಲಕ ಸಿಬ್ಬಂದಿಗಳಿಗೆ ಹುರಿದುಂಬಿಸಿದ್ದು ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದಲ್ಲಿ ತನ್ನ ವಾಹನಗಳಿಗೆ ರಿಯಾಯಿತಿಯನ್ನು ನೀಡಿದ ನಂತರ, ಈ ತ್ರೈಮಾಸಿಕದ ಕೊನೆಯಲ್ಲಿ ವಾಹನಗಳನ್ನು ಸರಿಯಾಗಿ ತಲುಪಿಸುವತ್ತ ಗಮನಹರಿಸುವಂತೆ ಉದ್ಯೋಗಿಗಳನ್ನು ಒತ್ತಾಯಿಸಿದ್ದಾರೆ.

“ಇನ್ನು ಸ್ವಲ್ಪ ದಿನ ಕಾಯಿರಿ, ಮಾರುಕಟ್ಟೆಗೆ ಹೆಚ್ಚಿನ ಕಾರು ಪೂರೈಸಲು ಆಸಕ್ತಿವಹಿಸಿ, ಇನ್ನು ಕೆಲವೇ ದಿನಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಕೆಲಸ ಮಾಡಿದರೆ ಮಾರುಕಟ್ಟೆ ಅದನ್ನು ಗುರುತಿಸುತ್ತದೆ” ಎಂದವರು ತಮ್ಮ ಈಮೇಲ್‌ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!