ಕಾಡಾನೆಗಳ ದಾಳಿಯಿಂದ ಕಾಫಿ ನಾಶ : ಅಪಾರ ನಷ್ಟ

ದಿಗಂತ ವರದಿ, ಮಡಿಕೇರಿ:

ತೋಟ ಮತ್ತು ಕಾಫಿ ತುಂಬಿದ ಚೀಲಗಳ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡಿ ನಷ್ಟ ಉಂಟು ಮಾಡಿರುವ ಘಟನೆ ಸೋಮವಾರಪೇಟೆ ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ವಾರಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಭಾನುವಾರ ಆರಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮದ ಸಜನ್ ಎಂಬವರ ತೋಟಕ್ಕೆ ನುಗ್ಗಿ ಕಾಫಿ ತುಂಬಿದ ಚೀಲಗಳನ್ನು ನಾಶ ಮಾಡಿದೆ. ಕಾಫಿ ಗಿಡ, ಬಾಳೆ, ಬೈನೆ ಮರಗಳನ್ನು ಧ್ವಂಸಗೊಳಿಸಿದೆ. ಅಕ್ಕಪಕ್ಕದ ತೋಟಗಳಿಗೂ ಲಗ್ಗೆ ಇಟ್ಟಿರುವ ಗಜಪಡೆ ಅಪಾರ ನಷ್ಟವನ್ನುಂಟು ಮಾಡಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿರುವ ಕೃಷಿಕ ವರ್ಗ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅರಣ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಬೇಕು, ಕಾಡಾನೆಗಳನ್ನು ಕಾಡಿಗಟ್ಟಬೇಕು ಮತ್ತು ವನ್ಯಜೀವಿಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!