ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹರಿದ ನಾಯಿ ವಿರುದ್ಧ ದೂರು ದಾಖಲಾಗಿದೆ. ತೆಲುಗು ದೇಶಂ ಬೆಂಬಲಿಗರಾದ ದಾಸರಿ ಉದಯಶ್ರೀ ವಿಜಯವಾಡದ ಪೊಲೀಸ್ ಠಾಣೆಯಲ್ಲಿ ನಾಯಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೀದಿ ನಾಯಿಯೊಂದು ಗೋಡೆಗೆ ಅಂಟಿಸಿದ್ದ ನಾಯಿಯ ಪೋಸ್ಟರ್‌ನ್ನು ಕಿತ್ತುಹಾಕಿತ್ತು. ಇದು ಸಿಎಂ ಅವರಿಗೆ ಮಾಡಿರುವ ಅವಮಾನ, ನಾಯಿಗೆ ಪ್ರಚೋದನೆ ನೀಡಿ ಈ ರೀತಿ ಮಾಡಿಸಲಾಗಿದೆ. ಜತೆಗೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಒಪ್ಪುವುದಿಲ್ಲ ಎಂದು ಉದಯಶ್ರೀ ಹೇಳಿದ್ದಾರೆ.
ನಾವು ನಮ್ಮ ಸಿಎಂರನ್ನು ಗೌರವಿಸುತ್ತೇವೆ, ಪ್ರೀತಿಸುತ್ತೇವೆ ಯಾವುದೋ ಬೀದಿ ನಾಯಿ ಬಂದು ಹೀಗೆ ಮಾಡೋದನ್ನು ಒಪ್ಪುವುದಿಲ್ಲ ಎಂದಿದ್ದಾರೆ.