ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನೇ ದಿನೇ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳಿಂದ ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಲಿಬರ್ಟಿ ಜನರಲ್ ಇನ್ಶೂರೆನ್ಸ್ ಕಂಪನಿಯು ‘ಲಿಬರ್ಟಿ ಎಟರ್ನಿಯಾ’ ಎಂಬ ಹೊಸ ;ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ.
ವ್ಯಕ್ತಿಗಳು ಹಾಗೂ ಕುಟುಂಬಗಳ ಬದಲಾಗುತ್ತಿರುವ ಆರೋಗ್ಯ ಅಗತ್ಯಗಳಿಗೆ ತಕ್ಕಂತೆ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ‘ಎಟರ್ನಿಯಾ ಬೇಸಿಕ್’, ‘ಎಟರ್ನಿಯಾ ಎನ್‌ಹ್ಯಾನ್ಸ್ಡ್’ ಮತ್ತು ‘ಎಟರ್ನಿಯಾ ಇನ್ಫಿನಿಟ್’ ಎಂಬ ಮೂರು ಆಯ್ಕೆಗಳಲ್ಲಿ ಈ ಯೋಜನೆ ಲಭ್ಯವಿದ್ದು, 5 ಲಕ್ಷದಿಂದ 3 ಕೋಟಿಯವರೆಗೆ ವಿಮಾ ರಕ್ಷಣೆ ಪಡೆಯಬಹುದಾಗಿದೆ.
ಯೋಜನೆಯ ವಿಶೇಷತೆಗಳು
ಜೀವಿತಾವಧಿಯಲ್ಲಿ ಒಮ್ಮೆ ಬಳಸಬಹುದಾದ ಅನಿಯಮಿತ ಕ್ಲೈಮ್ ಸೌಲಭ್ಯದಡಿ, ಆಯ್ದ ಒಂದು ಕ್ಲೈಮ್‌ಗೆ ವಾರ್ಷಿಕ ವಿಮಾ ಮೊತ್ತದ ಮಿತಿ ಅನ್ವಯವಾಗುವುದಿಲ್ಲ.
‘ಪಾಸ್ ದಿ ಏಜ್’ ಸೌಲಭ್ಯದ ಮೂಲಕ ಗ್ರಾಹಕರು ಮೊದಲ ಕ್ಲೈಮ್ ಸಲ್ಲಿಸುವವರೆಗೂ ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಹೆಚ್ಚಾಗುವುದಿಲ್ಲ.
ಚಿಕಿತ್ಸೆಗೆ ಹಣ ಬಳಕೆಯಾದ ಬಳಿಕವೂ ವಿಮಾ ಮೊತ್ತವನ್ನು ಅನಿಯಮಿತ ಬಾರಿ ಮರುಸ್ಥಾಪಿಸಿಕೊಳ್ಳುವ ಅವಕಾಶವಿದೆ.
ಕೇವಲ ಎರಡು ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ವಿಮಾ ರಕ್ಷಣೆ ದೊರೆಯಲಿದೆ.
ಗಂಭೀರ ಅನಾರೋಗ್ಯ ಅಥವಾ ದೀರ್ಘಕಾಲ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಲು ‘ಇಎಂಐ ಪ್ರೊಟೆಕ್ಟರ್’ ನೆರವಾಗಲಿದೆ.
ಇತರ ಸೌಲಭ್ಯಗಳು
ಒಳರೋಗಿ ಚಿಕಿತ್ಸೆ, ಡೇ ಕೇರ್, ಆಯುಷ್ ಚಿಕಿತ್ಸೆ, ಅಂಗಾಂಗ ದಾನಿಗಳ ವೆಚ್ಚ, ಆಂಬ್ಯುಲೆನ್ಸ್ ಸೇವೆ ಹಾಗೂ ಆಸ್ಪತ್ರೆಗೆ ದಾಖಲಾಗುವ 120 ದಿನಗಳ ಮುನ್ನ ಮತ್ತು ಬಿಡುಗಡೆಯಾದ 180 ದಿನಗಳ ನಂತರದ ಚಿಕಿತ್ಸಾ ವೆಚ್ಚವೂ ಇದರಲ್ಲಿ ಒಳಗೊಂಡಿದೆ. ಹೆಚ್ಚುವರಿಯಾಗಿ ಝೀರೋ ಡಿಡಕ್ಟ್ ಕವರ್, 500% ವರೆಗೆ ಸೂಪರ್ ಬೂಸ್ಟರ್, OPD, ಹೆರಿಗೆ ಮತ್ತು ನವಜಾತ ಶಿಶುವಿನ ವಿಮೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು.
ವೈಯಕ್ತಿಕ ಹಾಗೂ ಫ್ಲೋಟರ್ ಯೋಜನೆಯಡಿ ಗರಿಷ್ಠ ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳಿಗೆ ರಕ್ಷಣೆ ಸಿಗಲಿದ್ದು, ದೇಶಾದ್ಯಂತ 7,000ಕ್ಕೂ ಹೆಚ್ಚು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯವಿದೆ.
ಈ ಕುರಿತು ಮಾತನಾಡಿದ ಲಿಬರ್ಟಿ ಜನರಲ್ ಇನ್ಶೂರೆನ್ಸ್‌ನ ರಿಟೇಲ್ ಡಿಸ್ಟ್ರಿಬ್ಯೂಷನ್ ಮತ್ತು ಮಾರ್ಕೆಟಿಂಗ್ ವಿಭಾಗದ ಅಧ್ಯಕ್ಷ ಜಯೇಶ್ ಖತ್ರಿ, “ಆರೋಗ್ಯ ವಿಮೆಯಲ್ಲಿನ ಕೊರತೆಗಳನ್ನು ನೀಗಿಸಿ, ಕೈಗೆಟುಕುವ ಪ್ರೀಮಿಯಂನಲ್ಲಿ ದೀರ್ಘಕಾಲೀನ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ‘ಲಿಬರ್ಟಿ ಎಟರ್ನಿಯಾ’ ಯೋಜನೆಯನ್ನು ರೂಪಿಸಲಾಗಿದೆ” ಎಂದು ತಿಳಿಸಿದರು.



