ನನ್ನ ಮದುವೆಗೆ ನೀವೇ ಹುಡುಗ ಹುಡುಕಿ: ನಟಿ ರಮ್ಯಾ ನೀಡಿದ್ರು ಜವಾಬ್ದಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣಾ ಅಖಾಡದಲ್ಲಿ ಈಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಬಿರುಸಿನ ಪ್ರಚಾರ ನಡೆಸುತ್ತಿದ್ದು, ಈ ವೇಳೆ ಅವರ ಮದುವೆ ವಿಚಾರ ಮತ್ತೆ ಪ್ರಸ್ತಾಪವಾಗಿದೆ.

ಮಂಡ್ಯ ಕ್ಷೇತ್ರದ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ರಮ್ಯಾರನ್ನು ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ . ‘ರಮ್ಯಾ ಮದುವೆ ಯಾವಾಗ ಆಗುತ್ತಾರೆ?’ ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದು ಮಾಧ್ಯಮದವರಿಗೆ ಜವಾಬ್ದಾರಿ ನೀಡಿದರು.

‘ನನಗೂ ಹುಡುಗನ್ನ ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲೇ ಸ್ವಯಂವರನೇ ಮಾಡಿ’ ಎಂದು ಹಾಸ್ಯ ಚಟಾಕಿ ಬೇರೆ ಹಾರಿಸಿದರು. ರಮ್ಯಾ ಎಲ್ಲಿಗೆ ಹೋಗಲಿ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ, ಅವರು ಮಾತ್ರ ಅದನ್ನು ಕೂಲ್ ಆಗಿ ತಗೆದುಕೊಂಡು ಹಾಸ್ಯದಲ್ಲೇ ಮಾತನ್ನು ತೇಲಿಸಿ ಬಿಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!