ಕೊಲ್ಕತ್ತಾ ಪ್ರವಾಸ ದಶಕಗಳ ಫಿಂಜಾನ್‌ ಕೆಫೆಗೆ ನಾಂದಿ ಹಾಡಿದೆ ಅಂದರೆ ನಂಬಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಭಾರತದಲ್ಲಿ ಪ್ರತಿ ಕಪ್ ಚಹಾದ ಹಿಂದೆ ಒಂದು ಕಥೆಯಿರುತ್ತದೆ. ಅದೇ ರೀತಿ ಆ ದಿನ ಅವರ ಪೂರ್ವಜರು ಕೈಗೊಂಡ ಕೊಲ್ಕತ್ತಾ ಪ್ರವಾಸ ಇಂದು ಚಹಾ ಅಂಗಡಿಯೇ ಅವರ ಆಸ್ತಿ ಅಂದರೆ ನಂಬಲೇಬೇಕು. ಹೌದು, ತಾಹಾ ಅವರ ಅಜ್ಜ ಇಕ್ಬಾಲ್ ಹುಸೇನ್ 90 ರ ದಶಕದ ಆರಂಭದಲ್ಲಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ವಾಪಸ್‌ ಬರುವಾಗ ನಗರದಿಂದ ಕೆಲ ಸ್ಮಾರಕಗಳು ಮತ್ತು 30 ಕೆಜಿ ಚಹಾದ ಚೀಲದೊಂದಿಗೆ ಹೈದರಾಬಾದ್‌ಗೆ ಮರಳಿದರು.

ಆಗ ಚಹಾ ಪೂರೈಕೆ ಮತ್ತು ವಿತರಣಾ ವ್ಯವಹಾರವಾದ ʻಇಸ್ಪಹಾನಿʼ ಕಂಪನಿಯ ಪ್ರಾರಂಭ. ಅದೇ ಕಾಲಾ ನಂತರದಲ್ಲಿ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಫಿಂಜಾನ್ ಕೆಫೆಯ ಕಲ್ಪನೆಯನ್ನು ಉತ್ತೇಜಿಸಿತ್ತು. ಇಕ್ಬಾಲ್ ಕೋಲ್ಕತ್ತಾದಿಂದ ಹಿಂದಿರುಗಿದಾಗ, ಕುಟುಂಬವು ಶತಮಾನದಿಂದ ನಡೆಸುತ್ತಿರುವ ಔಷಧೀಯ ಉದ್ಯಮದ ಜೊತೆಗೆ ಚಹಾ ವ್ಯಾಪಾರವನ್ನು ಏಕೆ ಪ್ರಾರಂಭಿಸಬಾರದು ಎಂಬ ಆಲೋಚನೆ ಅವರ ತಲೆಗೆ ಬಿತ್ತು.

ಫಿಂಜಾನ್ ಟೀಸ್‌ನ ಭಾಗವಾಗಿರುವ ತಾಹಾ, ಟೀ ವ್ಯಾಪಾರವನ್ನು ವೈವಿಧ್ಯಗೊಳಿಸಲು ಮತ್ತು ಹೆಚ್ಚಿಸಲು ತನ್ನ ತಂದೆ ಮತ್ತು ಚಾಚಾ (ಚಿಕ್ಕಪ್ಪ) ಸ್ಥಾಪಿಸಿದ್ದಾಗಿ ತಿಳಿಸಿದರು. 2005 ರಲ್ಲಿ ಟೌಲಿಚೋಕಿ ಪ್ರದೇಶದಲ್ಲಿ ಸಣ್ಣ ಟೀ ಅಂಗಡಿಯ ರೂಪದಲ್ಲಿ ಇದನ್ನು ಸ್ಥಾಪಿಸಿ, ಅಲ್ಲಿ ಫಿಂಜಾನ್ ಚಹಾವನ್ನು ಮಾರಾಟ ಮಾಡುತ್ತಿದ್ದ ಕುಟುಂಬ 2012 ರಲ್ಲಿ ಹೈದರಾಬಾದ್‌ನ ಬಂಜಾರಾ ಹಿಲ್ಸ್ ರಸ್ತೆಗೆ ಬದಲಾಯಿಸಿದರು. ಅಲ್ಲಿಗೆ ಬಂದಿದ್ದೇ ತಡ ಸದಾ ಜನಜಂಗುಳಿ ಇರುವ ಸ್ಥಳವಾದ್ದರಿಂದ 2021ರ ವೇಳೆಗೆ ಆ ಕೆಫೆ ಐಷಾರಾಮಿ ಟೀ ಲಾಂಜ್ ಆಗಿ ಪರಿವರ್ತನೆಯಾಯಿತು.

Finjaan Cafe, Banjara Hills, Hyderabad

ಫಿಂಜಾನ್ ಕೆಫೆಯಲ್ಲಿ ʻಚಹಾʼಗೆ ಮೊದಲ ಆದ್ಯತೆ ಕೆಫೆ ಕೂಡಾ ಯಾವ ರಾಯಲ್‌ ಹೋಟೆಲ್ಗಿಂ‌ತ ಕಡಿಮೆಯಿಲ್ಲ. ನೀವು ಕೆಫೆಯನ್ನು ಪ್ರವೇಶಿಸುತ್ತಿದ್ದಂತೆ ಚೈನೀಸ್ ಟೀ ಟೇಬಲ್‌ನಲ್ಲಿ ‘ಟೀ ಸಮಾರಂಭ’ದ ಭಾಗವಾಗಲು ಆಹ್ವಾನಿಸಲಾಗುತ್ತದೆ. 13 ನೇ ಶತಮಾನದಲ್ಲಿ ಹಳೆಯ ಚೀನೀ ಪರಿಕಲ್ಪನೆಯಿಂದ ಹುಟ್ಟಿಕೊಂಡ ಚಹಾ ಸಮಾರಂಭಕ್ಕೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ, ಅತಿಥಿಯನ್ನು ಸ್ವಾಗತಿಸಿ ನಂತರ ಚಹಾವನ್ನು ನೀಡುವುದಾಗಿ ತಾಹಾ ಹೇಳುತ್ತಾರೆ. ಪ್ರತಿ ಟೇಬಲ್‌ನಲ್ಲಿ ಎರಡು ಆಸನವಿದ್ದು, ಅತಿಥಿಗಳು ತಾವು ಸವಿಯಲು ಇಷ್ಟಪಡುವ ಎರಡು ಅಥವಾ ಮೂರು ರುಚಿಯ ಚಹಾಗಳನ್ನು ಆಯ್ಕೆ ಮಾಡಬಹುದು.

Salman Taiyebi, Finjaan Cafe

ತಾಹಾ ಅವರು ‘ಜಾಸ್ಮಿನ್ ಪರ್ಲ್ ಟೀ’ ಮತ್ತು ‘ಬ್ಲೂಮಿಂಗ್ ಟೀ’ಗೆ ಆಯ್ಕೆ ಮಾಡಿಕೊಳ್ಳಲು ಹೆಚ್ಚಾಗಿ ಸೂಚಿಸುತ್ತಾರೆ. ಎರಡೂ ಚಹಾ ಹಿತವಾದ ರುಚಿಯನ್ನು ಹೊಂದಿರುತ್ತವೆ ಜೊತೆಗೆ ಆರೋಗ್ಯ ಕಡೆಯಿಂದಲೂ ಉತ್ತಮ. ಅಲರ್ಜಿಯ ಪ್ರತಿಕ್ರಿಯೆಗಳಿಗೆ ಸಹಾಯ ಪಡೆಯಲು ಮತ್ತು ಇವುಗಳ ವಿರುದ್ಧ ಹೋರಾಡಲು ‘ಹರ್ಬಲ್ ರಿಲೀಫ್ ಟೀ’ ಅನ್ನು ಶಿಫಾರಸು ಮಾಡುತ್ತಾರೆ.

Tea being poured into the sipper

ಒಂದು ಚಹಾವು 125 ರೂಗಳಿಂದ ಪ್ರಾರಂಭವಾಗಿ ರೂ 295 ವರೆಗೆ ಇರುತ್ತದೆ, ಇದು ಚಹಾದ ವಿವಿಧ ಆಧಾರವಾಗಿರುತ್ತದೆ. ಒಂದು ದಿನದಲ್ಲಿ ಸುಮಾರು 20 ಮಡಕೆಗಳಿಗೂ ಹೆಚ್ಚು ಆರ್ಡರ್‌ ಬರುವುದಾಗಿ ಕುಟುಂಬಸ್ಥರು ತಿಳಿಸಿದರು. ಒಂದು ಕಪ್ ಚಹಾ ಕುಡಿದ ನಂತರ ಕನಿಷ್ಠ ಮೂರು ಗಂಟೆಗಳ ಕಾಲ ಕೆಲಸ ಮಾಡಬಹುದು ಎಂದು ತಾಹಾ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!