Friday, October 7, 2022

Latest Posts

ವಿಮಾನದಲ್ಲಿ ಸಿಗರೇಟ್‌ ಸೇದಿದ ಬಾಬಿ ಕಟಾರಿಯಾ ವಿರುದ್ಧ ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಮಾನದಲ್ಲಿ ಸಿಗರೇಟು ಸೇದುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದ ಸೋಷಿಯಲ್‌ ಇನ್‌ಫ್ಲುಯೆನ್ಸರ್‌ ಬಾಬಿ ಕಟಾರಿಯಾ ವಿರುದ್ಧ ದೆಹೆಲಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿಮಾನದಲ್ಲಿ ಧೂಮಪಾನ ನಿಷೇಧಿಸಲ್ಪಟ್ಟಿದ್ದರೂ ಬಾಬಿ ಕಟಾರಿಯಾ ಅವರು ವಿಮಾನದಲ್ಲಿ ಕುಳಿತು ಸಿಗರೇಟು ಹಚ್ಚುತ್ತಿರುವ ವೀಡಿಯೋವೊಂದು ವೈರಲ್‌ ಆಗಿತ್ತು. ಈ ವಿಡಿಯೋದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಕೆಲವರು ಕೇಂದ್ರ ಸಚಿವರುಗಳಾದ ಅಮಿತ್‌ ಶಾ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟ್ಯಾಗ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂಧುಯಾ ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಪ್ರಸ್ತುತ ದೆಹಲಿ ಪೊಲೀಸರು ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಬಾಬಿ ಕಟಾರಿಯಾ ವಿರುದ್ಧ ಆಗಸ್ಟ್ 16 ರಂದು ಎಫ್ಐಆರ್ ದಾಖಲಿಸಿದ್ದಾರೆ. ನಾಗರಿಕ ವಿಮನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈಗಾಗಲೇ ಕಟಾರಿಯಾ ಅವರಿಗೆ 15 ದಿನಗಳ ಕಾಲ ವಿಮಾನಯಾನವನ್ನು ನಿಷೇಧಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!