ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ: ಅಮೂಲ್, ಮದರ್ ಡೈರಿಯಿಂದ ಜೇಬಿಗೆ ಬಿತ್ತು ಕತ್ತರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೂಲ್ ಹಾಗೂ ಮದರ್ ಡೈರಿಯಿಂದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಕಳೆದ ಫೆಬ್ರವರಿ​ ತಿಂಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಎರಡು ರೂ. ಏರಿಸಿದ್ದ ಅಮೂಲ್ ಹಾಗೂ ಮದರ್ ಡೈರಿ ಇದೀಗ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಅಮೂಲ್​ ಹಾಗೂ ಮದರ್ ಡೈರಿ ಪ್ರತಿ ಲೀಟರ್​ ಹಾಲಿನಲ್ಲಿ ಎರಡು ರೂ. ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಅಮೂಲ್ ಗೋಲ್ಡ್​ ಬೆಲೆ ಇದೀಗ ಪ್ರತಿ ಅರ್ಧ ಲೀಟರ್​ಗೆ 31 ರೂ, ಅಮೂಲ್ ತಾಜಾ ಅರ್ಧ ಲೀಟರ್​ಗೆ 25 ರೂ, ಹಾಗೂ ಅಮೂಲ್ ಶಕ್ತಿ ಅರ್ಧ ಲೀಟರ್​​ಗೆ 28 ರೂಪಾಯಿ ಆಗಲಿದೆ. ಎಂಆರ್​ಪಿಯಲ್ಲಿ ಶೇ. 4ರಷ್ಟು ಜಾಸ್ತಿಯಾಗಿದೆ. ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್​ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್​ಗೆ 45 ರೂ ಆಗಲಿದೆ.
ಹಾಲಿನ ಉತ್ಪಾದನೆಯ ವೆಚ್ಚ ಹೆಚ್ಚಳವಾಗಿರುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೂಲ್ ಕಂಪನಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!