Sunday, October 1, 2023

Latest Posts

ಕೆರೆಗೆ ತಳ್ಳಿ ಬಾಲಕನ ಹತ್ಯೆ ಪ್ರಕರಣ: 7 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ವರದಿ,ಮೈಸೂರು:

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಬಾಲಕನೊಬ್ಬನನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಚೇತನ್, ಪ್ರಕರಣ ಸಂಬAಧ ಹೆಮ್ಮರಗಾಲದ ಶ್ರೀನಿವಾಸ್, ರಾಜು, ನವೀನ್ ಹಾಗೂ ಮುದ್ದು ಎಂಬುವರ ವಿರುದ್ಧ ಮೃತ ಮಹೇಶ್ ತಂದೆ ಸಿದ್ದರಾಜು ದೂರು ನೀಡಿದ್ದರು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ.2ರಂದು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲದ 10ನೇ ತರಗತಿ ವಿದ್ಯಾರ್ಥಿ ಮಹೇಶ್ ಅಲಿಯಾಸ್ ಮನು ಹಳ್ಳೆಪುರ ಕೆರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.
ಈತನ ಸಹಪಾಠಿಗಳು ಕೆರೆ ಬಳಿ ಕರೆದುಕೊಂಡು ಹೋಗಿ ವಾಮಚಾರ ಮಾಡಿ ಸಾಯಿಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿತ್ತು. ಹೆಮ್ಮರಗಾಲದ ರಾಜು, ಶ್ರೀನಿವಾಸ್ ಶೆಟ್ಟಿ,ಮುದ್ದು ಹಾಗೂ ನವೀನ ಎಂಬುವವರು ಮಾಟಮಂತ್ರ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ ಉದ್ದೇಶದಿಂದ ಮಹೇಶ್ ಸಹಪಾಠಿಗಳಿಗೆ ಹೇಳಿದ್ದಾರೆ. ಅದರಂತೆ ಮಹೇಶ್ ನನ್ನು ಕೆರೆ ಬಳಿ ಕರೆದುಕೊಂಡು ಸಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!