Monday, October 2, 2023

Latest Posts

SHOCKING| ಬೆಂಗಳೂರು-ಕಾಚಿಗೂಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅಗ್ನಿ ಅವಘಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳವಾರ ರಾತ್ರಿ ಕಾಚಿಗೂಡದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮಹೆಬೂಬ್‌ನಗರ ಜಿಲ್ಲೆಯ ಬಾಲನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ಹಠಾತ್ ಬ್ರೇಕ್ ಹಾಕಿದಾಗ ರೈಲಿನ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿತು. ರೈಲ್ವೆ ಸಿಬ್ಬಂದಿ ಕೂಡಲೇ ಎಚ್ಚೆತ್ತು ಬೆಂಕಿ ನಂದಿಸಿದ್ದಾರೆ. ಇದರಿಂದ ಉಂಟಾಗಬಹುದಾದ ದೊಡ್ಡ ಅಪಾಯ ತಪ್ಪಿದೆ.

ಒಡಿಶಾ ರೈಲು ಅಪಘಾತ ಮಾಸುವ ಮುನ್ನವೇ ಬೆಂಗಳೂರು ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಪ್ರಯಾಣಿಕರು ಗಾಬರಿಗೊಂಡಿದ್ದರು. ಆದರೆ ಅಪಾಯ ತಪ್ಪಿದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 15 ನಿಮಿಷಗಳ ನಂತರ ರೈಲು ಬೆಂಗಳೂರಿಗೆ ಹೊರಟಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!