ನ್ಯೂಯಾರ್ಕ್‌ನಲ್ಲಿ ಬೆಂಕಿ ಅವಘಡ: ಭಾರತೀಯ ಮೂಲದ ಮಹಿಳಾ ಉದ್ಯಮಿ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಡಿಕ್ಸ್ ಹಿಲ್ಸ್ ಕಾಟೇಜ್‌ನಲ್ಲಿ ಮಹಿಳಾ ಉದ್ಯಮಿ ಮತ್ತು ಅಕೆಯ ಶ್ವಾನ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

32 ವರ್ಷದ ತಾನ್ಯಾ ಬತಿಜಾ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ.
ಡಿಸೆಂಬರ್ 14 ರಂದು ಈ ಘಟನೆ ನಡೆದಿದ್ದು, ಸಾವಿಗೆ ಬೆಂಕಿ ಅವಘಡ ಕಾರಣ ಎನ್ನಲಾಗುತ್ತಿದೆ.

ಬೆಂಕಿಯ ಜ್ವಾಲೆಯು ಹೆಚ್ಚಿದ್ದ ಕಾರಣ, ಆ ಮನೆಯೊಳಗೆ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಪಿತೂರಿಯ ಕೃತ್ಯವನ್ನು ಸಫೋಲ್ಕ್ ಕೌಂಟಿ ಪೊಲೀಸ್ ಇಲಾಖೆಯು ತಳ್ಳಿಹಾಕಿದೆ.
ತಾನ್ಯಾ ಬತಿಜಾ ಅವರು ಇತ್ತೀಚೆಗೆ ಲಾಂಗ್ ಐಲ್ಯಾಂಡ್‌ನ ಬೆಲ್‌ಪೋರ್ಟ್‌ನಲ್ಲಿ ಡಂಕಿನ್ ಡೊನಟ್ಸ್ ಔಟ್‌ಲೆಟ್ ಅನ್ನು ತೆರೆದಿದ್ದರು.

ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಎಂಬಿಎ ಮುಗಿಸಿದರು. ತಮ್ಮ ಎಂದಿನ ಬೆಳಗ್ಗೆಯ ವ್ಯಾಯಾಮಕ್ಕಾಗಿ ಎಚ್ಚರಗೊಂಡ ತಾನ್ಯಾ ಬತಿಜಾ ಅವರ ತಂದೆ ಗೋಬಿಂದ್ ಬತಿಜಾ ಅವರು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾರೆ. ಮತ್ತು ತಕ್ಷಣ 911 ಗೆ ಡಯಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೆ ಮಾಡಿದ ಅದೇ ಸಮಯದಲ್ಲಿ ಅವರ ಹೆಂಡತಿಯನ್ನು ಎಚ್ಚರಿಸಿದರು. ಅಲ್ಲದೆ, ಅವರು ಕಾಟೇಜ್‌ ಬಳಿ ಓಡಿ ಮಗಳನ್ನು ಹೊರಗೆ ತರಲು ಪ್ರಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿತ್ತುಎಂದೂ ಪೊಲೀಸ್‌ ಇಲಾಖೆ ವರದಿ ನೀಡಿದೆ.

ಇನ್ನು, ಸ್ಥಳೀಯ ದಿನಪತ್ರಿಕೆ, ನ್ಯೂಸ್‌ಡೇ ಪ್ರಕಾರ, ಗಸ್ತು ಅಧಿಕಾರಿಗಳು ಮತ್ತು ಸಾರ್ಜೆಂಟ್ ಒಬ್ಬರು ತಾನ್ಯಾ ಬತಿಜಾ ಅವರ ಕಾಟೇಜ್‌ಗೆ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಬೆಂಕಿ ಅವರನ್ನು ಹಿಮ್ಮೆಟ್ಟಿಸಿತು ಎಂದೂ ಹೇಳಲಾಗಿದೆ. ನಂತರ ಹೊಗೆಯನ್ನು ಕುಡಿದಿದ್ದ ಕಾರಣ ಇವರನ್ನು ಸ್ಟೋನಿ ಬ್ರೂಕ್ ಯೂನಿವರ್ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದೂ ತಿಳಿದುಬಂದಿದೆ.

ಳದಲ್ಲಿ ಬೆಂಕಿಯನ್ನುಆರಿಸಲು 60 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರನ್ನು ಕರೆಸಲಾಯಿತು ಎಂದು ಡಿಕ್ಸ್ ಹಿಲ್ಸ್ ಅಗ್ನಿಶಾಮಕ ಇಲಾಖೆಯ ವಕ್ತಾರರು ಹೇಳಿದರು.

ಗೋಬಿಂದ್ ಬತಿಜಾ ಸಹ ಒಬ್ಬರು ಉದ್ಯಮಿ ಮತ್ತು ಸಮುದಾಯವೊಂದರ ನಾಯಕರಾಗಿದ್ದು, ತಾನ್ಯಾ ಬತೀಜಾ ಕಾರ್ಲ್ಸ್ ಸ್ಟ್ರೈಟ್ ಪಾತ್‌ನಲ್ಲಿರುವ ತನ್ನ ಪೋಷಕರ ಮನೆಯ ಹಿಂದಿನ ಕಾಟೇಜ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್‌ ಇಲಾಖೆಯ ನರಹತ್ಯೆ ಘಟಕದ ಮುಖ್ಯಸ್ಥ ಸಫೋಲ್ಕ್ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಕೆವಿನ್ ಬೇರೆರ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!