Thursday, February 2, 2023

Latest Posts

BIG NEWS | 21 ವರ್ಷದ ಬಳಿಕ ಭಾರತದ ಮುಡಿಗೆ ‘ಮಿಸೆಸ್‌ ವರ್ಲ್ಡ್‌ ಕಿರೀಟ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022ನೇ ಸಾಲಿನ ಮಿಸೆಸ್‌ ವರ್ಲ್ಡ್‌ ಕಿರೀಟ ವನ್ನು ಭಾರತದ ಸರ್ಗಮ್‌ ಕೌಶಲ್‌ ಮುಡುಗೇರಿಸಿಕೊಂಡಿದ್ದಾರೆ. ಈ ಮೂಲಕ 21 ವರ್ಷದ ಬಳಿಕ ಮಿಸೆಸ್‌ ವರ್ಲ್ಡ್‌ ಕಿರೀಟವನ್ನು ಭಾರತಕ್ಕೆ ತಂದ ಖ್ಯಾತಿಗೆ ಸರ್ಗಮ್‌ ಕೌಶಲ್‌ ಭಾಜನರಾಗಿದ್ದಾರೆ.

ಅಮೆರಿಕದ ಲಾಸ್‌ ವೇಗಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸರ್ಗಮ್‌ ಅವರಿಗೆ ಮಿಸೆಸ್‌ ಇಂಡಿಯಾ ಕಿರೀಟ ತೊಡಿಸಲಾಗಿದೆ.

ಜಮ್ಮು-ಕಾಶ್ಮೀರದವರಾದ ಸರ್ಗಮ್‌ ಕೌಶಲ್‌ ಅವರು 2018ರಲ್ಲಿ ಮದುವೆಯಾಗಿದ್ದಾರೆ. ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆದಿರುವ ಇವರು ರೂಪದರ್ಶಿಯೂ ಆಗಿದ್ದಾರೆ. ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರಿಗೀಗ ವಿಶ್ವ ಕಿರೀಟ ದೊರೆತಿದೆ.

ದೇಶಕ್ಕೆ 21 ವರ್ಷದ ಬಳಿಕ ಮಿಸೆಸ್‌ ವರ್ಲ್ಡ್‌ ಕಿರೀಟ ದೊರೆತಿದೆ. 2001ರಲ್ಲಿ ಅದಿತಿ ಗೋವಿತ್ರಿಕರ್‌ ಅವರು ಮಿಸೆಸ್‌ ವರ್ಲ್ಡ್‌ ಎನಿಸಿದ್ದರು. ಅಲ್ಲದೆ, ಮಿಸೆಸ್‌ ವರ್ಲ್ಡ್‌ ಕಿರೀಟ ಮುಡಿಗೇರಿಸಿಕೊಂಡ ಭಾರತದ ಮೊದಲ ಮಹಿಳೆ ಎನಿಸಿದ್ದಾರೆ.

ಮದುವೆಯಾದ ಸುಂದರಿಯರಿಗೆ 1984ರಿಂದಲೂ ಮಿಸೆಸ್‌ ವರ್ಲ್ಡ್‌ ಪ್ರಶಸ್ತಿ ನೀಡಲಾಗುತ್ತಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!