ತೈಲ ಸಂಸ್ಕರಣ ಸ್ಥಳದಲ್ಲಿ ಅಗ್ನಿ ಅವಘಡ, 18 ಶೇಖರಣಾ ಘಟಕಗಳು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಇರಾನ್‌ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿ ಇರುವ ತೈಲ ಸಂಸ್ಕರಣಾ ಸ್ಥಳದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟಗಳು ಸಂಭವಿಸುತ್ತಲೇ ಇರುವ ಕಾರಣ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಘಟನಾ ಸ್ಥಳದಲ್ಲಿಂದ ದೂರ ಸರಿದಿವೆ.

ಮೂರು ಶೇಖರಣಾ ಘಟಕಗಳಲ್ಲಿ ಸ್ಪೋಟ ಸಂಭವಿಸಿದ್ದು, ಉಳಿದ ಘಟಕಗಳಿಗೆ ಬೆಂಕಿ ಆವರಿಸಿದೆ. ಇತ್ತೀಚೆಗೆ ಇರಾನ್‌ನ ಸ್ಥಾವರಗಳಲ್ಲಿ ಸ್ಫೋಟಗಳು ಮತ್ತು ಅಗ್ನಿ ಅವಘಡಗಳ ಪ್ರಕರಣಗಳು ಹೆಚ್ಚಾಗಿವೆ. ಅಕ್ಟೋಬರ್‌ನಲ್ಲಿಯೂ ವಿದ್ಯುತ್ ಸ್ಥಾವರವೊಂದರಲ್ಲಿ ಸ್ಪೋಟ ಸಂಭವಿಸಿದ ಇಬ್ಬರು ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!