Thursday, July 7, 2022

Latest Posts

ಭಲಾಸ್ವ ಡಂಪ್‌ ಯಾರ್ಡ್‌ನಲ್ಲಿ ದಟ್ಟ ಹೊಗೆ: ಜ್ಞಾನ ಸರೋವರ ಶಾಲೆಗೆ ಬೀಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ದೆಹಲಿಯ ಭಲಾಸ್ವ ಡಂಪ್ ಯಾರ್ಡ್‌ನಲ್ಲಿ ಮಂಗಳವಾರ ಸಂಜೆ 5:00 ರ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳ ಸಿಬ್ಬಂದಿಯ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಸ್ಥಳದಲ್ಲಿ ಇನ್ನೂ ಹೊಗೆಯಾಡುತ್ತಿದ್ದು ಅಲ್ಲಿ ವಾಸ ಮಾಡಲು ಕಷ್ಟ ಅಂತಿದಾರೆ ಸ್ಥಳೀಯರು. ಡಂಪ್‌ ಯಾರ್ಡ್‌ನಿಂದ ಕಲ್ಮಶ ಹೊಗೆ ಬರುತ್ತಿದ್ದು ಉಸಿರಾಟಕ್ಕೆ ಕಷ್ಟ ಎಂದಿದ್ದಾರೆ.

ಪರಿಸ್ಥಿತಿಯನ್ನು ಗಮನಿಸಿ ಯಾರ್ಡ್‌ ಸಮೀಪ ಇರುವ ಜ್ಞಾನ ಸರೋವರ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆ ನಡೆಸುವುದು ಸೂಕ್ತವಲ್ಲ ಹಾಗಾಗಿ ತಾತ್ಕಾಲಿಕವಾಗಿ ಮುಚ್ಚುತ್ತಿರುವುದಾಗಿ ಆಡಳಿ ಮಂಡಳಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss