ರೈಲು ಹಳಿ ಮೇಲೆ ಅಗ್ನಿಶಾಮಕ ಸಿಲಿಂಡರ್ ಪತ್ತೆ: ತುರ್ತು ಬ್ರೇಕ್ ಹಾಕಿದ ಲೋಕೋ ಪೈಲಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರ ಪ್ರದೇಶದಲ್ಲಿ ಈ ವಾರ ಎರಡನೇ ಬಾರಿಗೆ ರೈಲ್ವೆಗೆ ಸೇರಿದ ಅಗ್ನಿಶಾಮಕ ಸಿಲಿಂಡರ್ ರೈಲು ಹಳಿ ಮೇಲೆ ಬುಧವಾರ ಪತ್ತೆಯಾಗಿದೆ.

ಕಾನ್ಪುರದ ಅಂಬಿಯಾಪುರ ನಿಲ್ದಾಣದ ಬಳಿ ಬ್ರೇಕ್ ಹಾಕಿದಾಗ ಗೂಡ್ಸ್ ರೈಲಿನ ಲೋಕೋ ಪೈಲಟ್ ಇದನ್ನು ಗುರುತಿಸಿದ್ದಾರೆ.

ಬುಧವಾರ ಬೆಳಿಗ್ಗೆ 6:30 ರ ಸುಮಾರಿಗೆ ಮತ್ತೆ ಇಂತಹ ಘಟನೆ ಬೆಳಕಿಗೆ ಬಂದಿದ್ದು, ತುರ್ತು ಬ್ರೇಕ್ ಹಾಕಿದ ಲೋಕೋ ಪೈಲಟ್ , ಕೂಡಲೇ ಈ ವಿಚಾರವನ್ನು ಜಿಆರ್ ಪಿ ಮತ್ತು ರೈಲ್ವೆ ಪೊಲೀಸರಿಗೆ ತಿಳಿಸಿದರು. ಆದಾಗ್ಯೂ, ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಹಳಿಗಳ ಮೇಲೆ ಸಿಲಿಂಡರ್ ತರಹದ ವಸ್ತುವನ್ನು ಚಾಲಕ ಗುರುತಿಸಿದಾಗ ಗೂಡ್ಸ್ ರೈಲು ಅಂಬಿಯಾಪುರ ರೈಲು ನಿಲ್ದಾಣವನ್ನು ತಲುಪಿರಲಿಲ್ಲ. ನಂತರ ಅದು ಅಗ್ನಿಶಾಮಕ ಸಿಲಿಂಡರ್ ಎಂಬುದು ಗೊತ್ತಾಗಿದೆ ಎಂದು ಜಿಆರ್‌ಪಿ ಔಟ್‌ಪೋಸ್ಟ್‌ನ ಉಸ್ತುವಾರಿ ಅರ್ಪಿತ್ ತಿವಾರಿ ಹೇಳಿದರು. ಕೂಡಲೇ ಹಿರಿಯ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಮತ್ತೊಂದು ರೈಲಿನಿಂದ ಬಿದ್ದಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಬಿಜಿಟಿಎಸ್ ಮೂರ್ತಿ ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ಝಾನ್ಸಿ – ಕಾನ್ಪುರ ಮಾರ್ಗದ ಭೀಮ ಸೇನ್ ಹಾಗೂ ಗೋವಿಂದ ಪುರಿ ರೈಲು ನಿಲ್ದಾಣಗಳ ನಡುವೆ ರೈಲು ಹಳಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಲೋಕೋ ಪೈಲಟ್ ದೂರದಲ್ಲೇ ಸಿಲಿಂಡರ್ ಗುರುತಿಸಿ ರೈಲಿನ ತುರ್ತು ಬ್ರೇಕ್ ಹಾಕಿದ್ದರು.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!