ಕುಮಟಾದ ಹ್ಯೂಂಡೈ ಶೋರೂಮಿನಲ್ಲಿ ಅಗ್ನಿ ಅವಘಡ

ಹೊಸದಿಗಂತ ವರದಿ ಕುಮಟಾ :
ತಾಲೂಕಿನ ಕಡೆಕೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹುಂಡೈ ಶೋರೂಮ್ ನಲ್ಲಿ ಸೋಮವಾರ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದೆ.

ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಕೂಡಲೇ ಕುಮಟಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಅನಾಹತವನ್ನು ತಪ್ಪಿಸಿ, ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಯಲ್ಲಿ ಒಂದು ಕಾರು, ನಾಲ್ಕು ಕಂಪ್ಯೂಟರ್, ಎರಡು ಟೇಬಲ್, ಕೀಬೋರ್ಡ್ ಸೇರಿ ಹಲವು ದಾಖಲೆಗಳು ಬೆಂಕಿಗೆ ಆಹುತಿಯಾಗಿದೆ. ಬೋರ್ಡ್ ನಲ್ಲಿ ಶಾರ್ಟ್ ಸಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!