ನೇಪಾಳದಿಂದ ಟೇಕಾಫ್ ಆದ ವಿಮಾನದಲ್ಲಿ ಬೆಂಕಿ: ತಪ್ಪಿದ ಭಾರೀ ದೊಡ್ಡ ಅನಾಹುತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೇಪಾಳದ ರಾಜಧಾನಿ ಕಠ್ಮಂಡು ವಿಮಾನ ನಿಲ್ದಾಣದಿಂದ ದುಬೈಗೆ ಟೇಕ್ ಆಫ್ ಆದ ವಿಮಾನದ ಎಂಜಿನ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲ್ಯಾಡಿಂಗ್ ಮಾಡಲು ಪರದಾಟ ನಡೆಸಿದ್ದಾರೆ . ಬಳಿಕ ಲಯಕ್ಕೆ ಬಂದಿದ್ದು, ದುಬೈಯತ್ತ ಪ್ರಯಾಣ ಬೆಳೆಸಿದೆ.

50 ನೇಪಾಳಿ ಪ್ರಯಾಣಿಕರು ಸೇರಿದಂತೆ 150 ಕ್ಕೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಕರಿದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ದುಬೈಗೆ ತೆರಳುತ್ತಿದ್ದ ವಿಮಾನವು ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಯಲು ಪ್ರಯತ್ನಿಸುತ್ತಿದ್ದು, ಇದೀಗ ವಿಮಾನವನ್ನು ದುಬೈಗೆ ಹಾರಿಸಲಾಗಿದೆ .

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರವು , ಫ್ಲೈ ದುಬೈ ಫ್ಲೈಟ್ 576 (ಬೋಯಿಂಗ್ 737-800) ಕಠ್ಮಂಡುವಿಗೆ ದುಬೈಗೆ ಸ್ವಲ್ಪ ಸಮಯದ ನಂತರ ಸಾಮಾನ್ಯ ಸ್ಥಿತಿಗೆ ಬಂದಿದ್ದು, ಯೋಜನೆಯ ಪ್ರಕಾರ ದುಬೈಗೆ ತೆರಳಿದೆ ಎಂದು ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!