Tuesday, March 21, 2023

Latest Posts

ಹಿಮ ಬಿರುಗಾಳಿಗೆ ಅಮೆರಿಕ ಜನ ತತ್ತರ:10 ಲಕ್ಷ ಮನೆಗಳಲ್ಲಿ ಪವರ್ ಕಟ್, ವಿಮಾನ ಸೇವೆ ರದ್ದು  

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮದ ಬಿರುಗಾಳಿ ಅಮೆರಿಕವನ್ನು ನಡುಗುವಂತೆ ಮಾಡುತ್ತಿದೆ. ಇಲಿನಾಯ್ಸ್, ಇಂಡಿಯಾನಾ, ಮಿಚಿಗನ್, ನ್ಯೂಯಾರ್ಕ್ ಮತ್ತು ವಿಸ್ಕಾನ್ಸಿನ್‌ನಂತಹ ಪ್ರದೇಶಗಳು ಹಿಮಪಾತದಿಂದ ಸಂಪೂರ್ಣವಾಗಿ ಜರ್ಜರಿತವಾಗಿವೆ.

ಅಮೆರಿಕದಾದ್ಯಂತ ಲಕ್ಷಾಂತರ ಜನರು ಹಿಮದಿಂದ ತೊಂದರೆಗೀಡಾಗಿದ್ದಾರೆ. ವಾಷಿಂಗ್ಟನ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ ಹಿಮದ ಪ್ರಭಾವ ಹೆಚ್ಚಾಗಿde. ದೇಶಾದ್ಯಂತ 9,70,000 ಕ್ಕೂ ಹೆಚ್ಚು ನಾಗರಿಕರಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ರಸ್ತೆಗಳಲ್ಲಿ ಸರಾಸರಿ 18 ಇಂಚುಗಳಷ್ಟು ಹಿಮ ಸಂಗ್ರಹಿಸಲಾಗಿದೆ. ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಹಲವೆಡೆ ತಾಪಮಾನ ಮೈನಸ್ 40 ಡಿಗ್ರಿಗೆ ಕುಸಿದಿದೆ. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಿಮ ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ.

2,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, 15,000 ವಿಮಾನಗಳು ತಡವಾಗಿ ಓಡುತ್ತಿವೆ. ಹಿಮ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಮಿಚಿಗನ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ವಯಂಸೇವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಿಮ ತೆಗೆಯುವಾಗ ವಿದ್ಯುತ್ ತಂತಿ ತುಂಡಾಗಿ ಹಿಮದ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ಸ್ಪರ್ಶಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ಇಲ್ಲಿನ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. 20,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯಾಪಾರ ಸಂಕೀರ್ಣಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಅಮೆರಿಕದಲ್ಲಿ ಈ ರೀತಿಯಾಗಿ ಕೆಲವು ರಾಜ್ಯಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದರೆ, ಓಹಿಯೋ ಕಣಿವೆ ಮತ್ತು ದಕ್ಷಿಣ ಪ್ರದೇಶಗಳು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!