ಅಗ್ನಿಪಥ: ಅನವಶ್ಯಕ ಪ್ರತಿಭಟನೆ ನಡೆಸುವವರಿಗೆ ಎಚ್ಚರಿಕೆ ಮುಟ್ಟಿಸಲು ಪೊಲೀಸರ ರೂಟ್ ಮಾರ್ಚ್

ಹೊಸದಿಗಂತ ವರದಿ, ಬಾಗಲಕೋಟೆ:

ಅಗ್ನಿಪಥ ಯೋಜನೆಯಡಿ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯದ ಹಾಗೂ ರಾಜ್ಯ ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿದ್ದು ಮುಂಜಾಗೃತಾ ಕ್ರಮವಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಸಲಾಯಿತು.
ನಗರದ ಕೃಷ್ಣಾ ಚಿತ್ರಮಂದಿರದ ಎದುರಿನ ಆವರಣದಿಂದ ಆರಂಭಗೊಂಡ ಪೊಲೀಸರ ರೂಟಮಾರ್ಚ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ್ ಮಾತನಾಡಿ, ಅಗ್ನಿಪಥ ಯೋಜನೆಯಡಿ ನೇಮಕಾತಿಗೆ
ಸಂಬಂಧಿಸಿದಂತೆ ಯಾವುದೇ ದೊಂಬೆ, ಪ್ರತಿಭಟನೆ ನಡೆಸಬಾರದು ಎಂದು ನಮ್ಮ ಇಲಾಖೆಯಿಂದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯ ಗಡಿ ಭಾಗದ ಲ್ಲಿ‌ ನಾಕಾಬಂಧಿ ಹಾಕಲಾಗಿದರ. ತಾಲೂಕಿನ ಗಡಿಭಾಗದಲ್ಲಿ ಯೂ ಕೂಡ ನಾಕಾ ಬಂಧಿ ಹಾಕಲಾಗಿದೆ. ಬೇರೆ ಜಿಲ್ಲೆಯಿಂದ ಹಾಗೂ ತಾಲೂಕಿನಿಂದ ಪ್ರತಿಭಟನೆಕಾರರು ಬರುವುದನ್ನು ತಪಾಸಣೆ ಮಾಡಲು ಕ್ರಮ ವಹಿಸಲಾಗಿದೆ‌ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!