ಅಗ್ನಿಪಥ ಅತ್ಯಂತ ಉಪಯುಕ್ತವಾದ ಯೋಜನೆ: ಬಿ.ಸಿ.ಪಾಟೀಲ

ಹೊಸದಿಗಂತ ವರದಿ, ಗದಗ :

ಮಿಲಿಟರಿ ಸೇರಬೇಕು ಎನ್ನುವರು ದೇಶಭಕ್ತರು, ಕಲ್ಲು ಹೊಡೆಯುವವರು, ರೈಲು, ಲಾರಿ ಸುಡುವವರಿಗೆ ಸೈನ್ಯದಲ್ಲಿ ಏನು ಕೆಲಸ ಮಾಡುತ್ತಾರೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಲ್ಕು ವರ್ಷ ಸೈನ್ಯದಲ್ಲಿ ಸೇವೆ ಮಾಡಿದರೆ ಶೇ. 10 ಮೀಸಲಾತಿ ಇರುತ್ತದೆ. ಮುಂದೆ ಬೇರೆ ಬೇರೆ ಇಲಾಖೆಯಲ್ಲಿ ಮುಂದೆ ಕೆಲಸ ಮಾಡಬಹುದು. ಸೈನ್ಯಗೆ ಸೇರಬೇಕೆನ್ನುವರು ದೇಶಭಕ್ತರು ಅವರಿಗೆ ದೇಶದ ಬಗ್ಗೆ ಪ್ರೀತಿ, ಪ್ರೇಮ, ಸ್ವಾಭಿಮಾನ ಇರಬೇಕು. ಯಾವುದೇ ಶಕ್ತಿ ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ಅಷ್ಟೊಂದು ಯುವಕರ ಏಕಾಎಕಿ ಆಗಿ ಹೇಗೆ ಸೇರುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು ಯುವ ಸಮೂಹವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿಗಳ ವರ್ಚಸ್ಸ್ ಕುಗ್ಗಿಸಲು ಯುವಕರನ್ನು ಪ್ರಚೋದನೆ ಮೂಲಕ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ದಯಮಾಡಿ ಯುವಕರು ಅಂತಹ ಮಾತುಗಳಿಗೆ ಕಿವಿಗೊಡಬಾರದು ಎಂದು ಸಚಿವ ಬಿ.ಸಿ.ಪಾಟೀಲ ಅವರು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!