18ನೇ ವಯಸ್ಸಿಗೆ ನೇಣುಗಂಬಕ್ಕೇರಿದ ಈತ ಭಾರತೀಯರ ಮನದಲ್ಲಿ ಅಮರನಾಗಿ ಉಳಿದ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ಅನಂತ್ ಲಕ್ಷ್ಮಣ್ ಕನ್ಹೆರೆ (1892-1910) ನಾಸಿಕ್‌ನ ಸ್ವಾತಂತ್ರ್ಯ ಹೋರಾಟಗಾರ. 1909 ರ ಡಿಸೆಂಬರ್ 21 ರಂದು ಜನಿಸಿದ  ಆತ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾದ.
ಮಹಾನ್‌ ಕ್ರಾಂತಿಕಾರಿಯಾಗಿದ್ದ ಅನಂತ್ ಲಕ್ಷ್ಮಣ್ ಕನ್ಹೆರೆ ನಾಸಿಕ್ ಪ್ರದೇಶದ ಕಲೆಕ್ಟರ್ ಆಗಿದ್ದ ಜಾಕ್ಸನ್ ರನ್ನು ಗುಂಡಿಕ್ಕಿ ಕೊಂದರು. ಈ ಹತ್ಯೆಯು ಭಾರತೀಯ ಕ್ರಾಂತಿಕಾರಿ ಚಳುವಳಿಯ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ.
ಕೃತ್ಯದ ಸಂಬಂಧ ಕನ್ಹೆರೆ ಅವರನ್ನು ಬಾಂಬೆ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆ ಬಳಿಕ 1910ರ ಏಪ್ರಿಲ್ 19 ರಂದು ಥಾಣೆ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಕನ್ಹೆರೆ ಕೇವಲ 18ನೇ ವರ್ಷದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿ ಭಾರತೀಯ ನೆನಪಿನಂಗಣದಲ್ಲಿ ಅಜರಾಮರನಾಗಿ ಉಳಿದುಹೋದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!