ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿಯ ಸಂಭ್ರಮದ ಪಟಾಕಿಗಳನ್ನು ಸಿಡಿಸುವ ವೇಳೆ ಗಾಯಗೊಂಡವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
ನಿನ್ನೆಯಷ್ಟೇ 13 ಮಂದಿ ಪಟಾಕಿಯಿಂದ ಗಾಯಗೊಂಡಿದ್ದು, ಹೆಚ್ಚಿನ ಮಂದಿಗೆ ಕಣ್ಣಿಗೆ ಗಾಯಗಳಾಗಿವೆ. ೧೩ ಜನರಲ್ಲಿ ಮೂವರು ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿರುವ 18 ವರ್ಷದ ಯುವಕನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ. ಧರ್ಮಾವರಂನಲ್ಲಿ ಬಾಲಕಿ ಹಾಗೂ 22 ವರ್ಷದ ಯುವತಿಗೂ ಕಣ್ಣಿಗೆ ಗಾಯಗಳಾಗಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಹೊಡೆಯುವವರಿಗಿಂತ ಪಟಾಕಿ ಹೊಡೆಯುವುದನ್ನು ನೋಡಲು ನಿಂತಿದ್ದವರಿಗೇ ಗಾಯಗಳಾಗಿವೆ.