ಇಂದಿನಿಂದ ಸ್ಮೃತಿ ಇರಾನಿಯ ‘ನಯೀ ಸೋಚ್ ನಯೀ ಕಹಾನಿ’ ರೇಡಿಯೋ ಕಾರ್ಯಕ್ರಮ ಪ್ರಸಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸರ್ಕಾರದ ಉಪಕ್ರಮಗಳ ಸಹಾಯದಿಂದ ಮಹಿಳೆಯರ ಸಬಲೀಕರಣದ ಕಥೆಗಳನ್ನು ಮತ್ತು ಭಾರತದಲ್ಲಿ ಮಹಿಳೆಯರ ಜೀವನವನ್ನು ರೂಪಿಸುವಲ್ಲಿ ಅವರ ಪಾತ್ರದ ಕುರಿತಾಗಿ ತಿಳಿಸುವ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಆಯೋಜಿಸುತ್ತಿದ್ದಾರೆ.

ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ, ಕ್ರೀಡೆ, ಆರೋಗ್ಯ ಮತ್ತು ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಯಶಸ್ಸನ್ನು ಆಚರಿಸುವ ಕಾರ್ಯಕ್ರಮ ಇದಾಗಿದೆ.

ವಾರದಲ್ಲಿ ಒಂದು ಗಂಟೆಯ ಕಾರ್ಯಕ್ರಮ ‘ನಯೀ ಸೋಚ್ ನಯೀ ಕಹಾನಿ -ಎ ರೇಡಿಯೋ ಜರ್ನಿ ವಿತ್ ಸ್ಮೃತಿ ಇರಾನಿ’ ಭಾರತದ ಅತಿದೊಡ್ಡ ಪ್ರಸಾರಕ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ 10 ರವರೆಗೆ ಪ್ರಸಾರವಾಗಲಿದೆ.

ಮೊದಲ ಶೋ ನವೆಂಬರ್ 15, ಬುಧವಾರದಂದು ದೆಹಲಿಯ ಆಕಾಶವಾಣಿ ಗೋಲ್ಡ್ 100.1 MHz ನಲ್ಲಿ ಪ್ರಸಾರವಾಗಲಿದೆ. ಇದನ್ನು ದೇಶಾದ್ಯಂತ ಆಕಾಶವಾಣಿ ಕೇಂದ್ರಗಳು ಸಹ ಪ್ರಸಾರ ಮಾಡಲಿವೆ. ಕಾರ್ಯಕ್ರಮವು NewsOnAIR ಅಪ್ಲಿಕೇಶನ್‌ನಲ್ಲಿ, ಆಕಾಶವಾಣಿ ವೆಬ್‌ಸೈಟ್ www.newsonair.gov.in ನಲ್ಲಿ, ಆಕಾಶವಾಣಿ ಯೂಟ್ಯೂಬ್ ಚಾನೆಲ್ @airnewsofficial ಮತ್ತು ಅದರ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿರುತ್ತದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!