ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿಯ ಆಲದಕಟ್ಟಿ ಬಳಿಯ ಗೋದಾಮಿನಲ್ಲಿ ಪಟಾಕಿ ಗೋದಾಮಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗಿದೆ. ಗೋದಾಮಿನಲ್ಲಿ ಮತ್ತೊಂದು ಮೃತದೇಹ ಸಿಕ್ಕಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಶಿವಲಿಂಗ ಅಕ್ಕಿ, ರಮೇಶ್ ಬಾರ್ಕಿ, ದ್ಯಾಮಪ್ಪ, ಜಯಣ್ಣ ಮೃತ ದುರ್ದೈವಿಗಳು.
ಘಟನೆ ಸಂಬಂಧ ಗೋದಾಮು ಮಾಲೀಕ ಕುಮಾರ ಸಾತೇನಹಳ್ಳಿಯನ್ನು ಹಾವೇರಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿ 16 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದರು. ಅವಘಡದಲ್ಲಿ ಒಂದು ಕೋಟಿಗೂ ಅಧಿಕ ಪಟಾಕಿ ದಾಸ್ತಾನು ಸುಟ್ಟು ಬೂದಿಯಾಗಿದೆ.
ಘಟನೆಯ ಮಾಹಿತಿ ಪಡೆದ ಸಿಎಂ
ನಿನ್ನೆ ನಡೆದ ಪಟಾಕಿ ಗೋದಾಮು ಅವಘಡದ ಬಗ್ಗೆ ಸಿಎಂ ಸಿದರಾಮಯ್ಯ ಮಾಹಿತಿ ಪಡೆದರು. ಜೊತೆಗೆ ಇಂದು ಸಚಿವ ಶಿವಾನಂದ ಪಾಟೀಲ್ ಘಟನಾಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.