ಅಸ್ಸಾಂ-ಮೇಘಾಲಯ ಗಡಿಯಲ್ಲಿ ಫೈರಿಂಗ್: ಆರು ಜನರ ಸಾವು, ಇಂಟರ್​ನೆಟ್ ಸೇವೆ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸೋಂ ಮತ್ತು ಮೇಘಾಲಯ ಗಡಿಯ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ, ಆರು ಮಂದಿ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮೇಘಾಲಯ ಸರ್ಕಾರವು ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಿದೆ.
ಮೃತಪಟ್ಟವರಲ್ಲಿ ಐವರು ಮೇಘಾಲಯದವರಾಗಿದ್ದು, ಒಬ್ಬ ಅಸ್ಸಾಂನ ಅರಣ್ಯ ರಕ್ಷಕ ಸಿಬ್ಬಂದಿ ಎಂದು ವರದಿಯಾಗಿದೆ.

ಇಲ್ಲಿನ ಮುಕ್ರೋ ಪ್ರದೇಶದಲ್ಲಿ ಟ್ರಕ್​ನಲ್ಲಿ ಮರದ ತುಂಡುಗಳಳನ್ನು ಸಾಗಿಸಲಾಗಿತ್ತು. ಈ ವೇಳೆ ಅಸ್ಸೋಂ ಅರಣ್ಯಾಧಿಕಾರಿಗಳು ಪೊಲೀಸರ ತಂಡದ ಸಹಾಯದಿಂದ ಟ್ರಕ್​ಅನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ, ಟ್ರಕ್​ ಚಾಲಕ ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಸೂಚನೆಗೂ ಕಿವಿಗೊಡದೇ ಹಾಗೆ ಚಲಾಯಿಸಲು ಮುಂದಾಗಿದ್ದ. ಆಗ ಟೈರ್​ಗೆ ಅಧಿಕಾರಿಗಳು ಗುಂಡು ಹಾರಿಸಿದ್ದರು.

ಅಷ್ಟರಲ್ಲಿ ಮೇಘಾಲಯದ ಆ ಭಾಗದ ಸ್ಥಳೀಯರು ವಿವಿಧ ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಅಸ್ಸಾಂ ಪೊಲೀಸ್​ ಮತ್ತು ಅರಣ್ಯ ಸಿಬ್ಬಂದಿಯನ್ನು ಸುತ್ತುವರಿದಿದ್ದಾರೆ. ಅವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ಅಸ್ಸಾಂ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಅಸ್ಸೋಂನ ಅರಣ್ಯ ಸಿಬ್ಬಂದಿಯೊಬ್ಬರನ್ನೂ ಆಕ್ರೋಶಿತ ಜನರು ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!